Bengaluru, Jan. 24: Ratha Saptami and National Voters Day were celebrated herein Rashtrotthana Vidya Kendra – Banashankari. The program was graced by the chief guest Sri Dr. Sudhir Deshpande, a renowned yoga researcher and experienced yoga teacher. The students explained the importance of Ratha Saptami and the importance of National Voters' Day celebrated on this day. Pledge was taken as part of National Voters' Day. Yoga expert students demonstrated yoga postures. Then, Yoga teacher Smt. Premalatha read out the Yoga report and said, “Every year, a Suryanamaskar yajna is organized one week before Ratha Saptami. Accordingly, the total number of Suryanamaskar performed by students and parents at home is 3,53,092 and the purpose behind providing yoga education in the surrounding government schools is to build a healthy and sustainable society.” Addressing the program, the chief guest, Sri. Dr. Sudhir Deshpande, said; “Yoga is a tool to balance our bodies and minds. The tasks we do daily depend on the bodies and minds. The sun is the source of energy for all living beings. Vitamin-D, which comes from the sun, is very essential for all living beings and keeping all this scientific background in mind, we celebrate Ratha Saptami every year. We need to incorporate the discipline of the sun in our lives through daily practice. We can only give him a namaskar.” Then the teachers and about 2,500 students performed a mass Surya Namaskar. The program concluded with Shavasana/Yoga Nidra after 108 Surya Namaskars led by the yoga teacher.

ಬೆಂಗಳೂರು, ಜ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ರಥಸಪ್ತಮಿ ಮತ್ತು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸುಪ್ರಸಿದ್ದ ಯೋಗ ಸಂಶೋಧಕರಾದ, ಅನುಭವಿ ಯೋಗ ಶಿಕ್ಷಕರಾದ ಶ್ರೀ ಡಾ. ಸುಧೀರ್ ದೇಶಪಾಂಡೆಯವರು ಆಗಮಿಸಿದ್ದರು. ವಿದ್ಯಾರ್ಥಿಗಳು ರಥಸಪ್ತಮಿಯ ಮಹತ್ವವನ್ನು ಮತ್ತು ಈ ದಿನ ಆಚರಿಸಲಾದ ರಾಷ್ಟ್ರೀಯ ಮತದಾರರ ದಿನ ದ ಮಹತ್ವವನ್ನು ತಿಳಿಸಿದರು. ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಪ್ರತಿಜ್ಞಾ ಸ್ವೀಕಾರವನ್ನು ಮಾಡಲಾಯಿತು. ಯೋಗ ಪರಿಣಿತ ವಿದ್ಯಾರ್ಥಿಗಳು ಯೋಗಭಂಗಿಯನ್ನು ಪ್ರದರ್ಶಿಸಿದರು. ತದನಂತರ ಯೋಗ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಅವರು ಯೋಗ ವರದಿಯನ್ನು ವಾಚಿಸುತ್ತಾ “ಪ್ರತಿ ವರ್ಷವೂ ರಥಸಪ್ತಮಿಯ ಒಂದು ವಾರ ಮುಂಚಿತವಾಗಿ ಸೂರ್ಯನಮಸ್ಕಾರ ಯಜ್ಞವನ್ನು ಹಮ್ಮಿಕೊಳ್ಳಲಾಗುತ್ತದೆ. ಅದರಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ನಿತ್ಯ ಮನೆಯಲ್ಲಿ ಮಾಡಿದ ಸೂರ್ಯನಮಸ್ಕಾರಗಳ ಒಟ್ಟು ಸಂಖ್ಯೆ 3,53,092 ಆಗಿರುವುದಾಗಿಯೂ ಮತ್ತು ಸುತ್ತಮುತ್ತಲಿನ ಸರಕಾರಿ ಶಾಲೆಗಳಲ್ಲಿ ಯೋಗಶಿಕ್ಷಣ ನೀಡುತ್ತಿರುವ ಹಿಂದಿನ ಉದ್ದೇಶ ಸ್ವಸ್ಥ-ಸುಸ್ಥಿರ ಸಮಾಜ ನಿರ್ಮಾಣ” ಎಂಬುದನ್ನು ತಿಳಿಸಿಕೊಟ್ಟರು. ಕಾರ್ಯಕ್ರಮವನ್ನುದ್ದೇಶಿಸಿ ಮುಖ್ಯ ಅತಿಥಿಗಳಾದ ಶ್ರೀಯುತ ಡಾ. ಸುಧೀರ್ ದೇಶಪಾಂಡೆಯವರು ಮಾತನಾಡುತ್ತಾ;“ಯೋಗ ಎಂಬುದು ನಮ್ಮ ದೇಹ ಹಾಗೂ ಮನಸ್ಸುಗಳನ್ನು ಸಮದೂಗಿಸುವ ಸಾಧನವಾಗಿದೆ. ನಾವು ನಿತ್ಯ ಮಾಡುವ ಕಾರ್ಯಗಳು ದೇಹ ಮತ್ತು ಮನಸ್ಸುಗಳನ್ನು ಅವಲಂಬಿಸಿರುತ್ತದೆ. ಸೂರ್ಯ ಸಕಲ ಜೀವ ಚರಾಚರಗಳ ಮೂಲ ಶಕ್ತಿಕೇಂದ್ರವಾಗಿದ್ದಾನೆ. ಸೂರ್ಯನಿಂದ ಬರುವ ವಿಟಮಿನ್-ಡಿ ಜೀವಸತ್ವ ಎಲ್ಲ ಜೀವಿಗಳಿಗೂ ಅತೀ ಅವಶ್ಯಕವಾಗಿದ್ದು ಈ ಎಲ್ಲಾ ವೈಜ್ಞಾನಿಕ ಹಿನ್ನೆಲೆಯನ್ನಿಟ್ಟುಕೊಂಡು ನಾವು ಪ್ರತಿ ವರ್ಷ ರಥಸಪ್ತಮಿಯನ್ನು ಆಚರಿಸುತ್ತೇವೆ. ನಿತ್ಯ ಅಭ್ಯಾಸದಿಂದ ಸೂರ್ಯನ ಶಿಸ್ತನ್ನುನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಆತನಿಗೆ ಒಂದು ನಮಸ್ಕಾರವನ್ನಷ್ಟೆ ನಾವು ಕೊಡಲು ಸಾಧ್ಯ” ಎಂದು ನುಡಿದರು.ನಂತರ ಶಿಕ್ಷಕರು ಹಾಗೂ ಸುಮಾರು 2,500 ವಿದ್ಯಾರ್ಥಿಗಳು ಸಾಮೂಹಿಕ ಸೂರ್ಯನಮಸ್ಕಾರವನ್ನು ಮಾಡಿದರು. ಯೋಗ ಶಿಕ್ಷಕರ ನೇತೃತ್ವದಲ್ಲಿ 108 ಸೂರ್ಯನಮಸ್ಕಾರದ ನಂತರ ಶವಾಸನ/ಯೋಗನಿದ್ರೆಯ ಮೂಲಕ ಕಾರ್ಯಕ್ರಮ ಸಮಾಪ್ತಿಯಾಯಿತು.