Bengaluru, Oct. 30: Deepavali was celebrated herein Rashtrotthana Vidya Kendra – Banashankari and ‘National Unity Day’ was celebrated as part of Sardar Vallabhbhai Patel Jayanti.The students spoke about the life and achievements of Sardar Vallabhbhai Patel. Respect was paid to Sardar Vallabhbhai Patel by taking the oath.On the occasion of the celebration of Deepavali festival, the students talked about the celebration of Deepavali festival, manners and importance. The students sang a melodious group song depicting the atmosphere of Deepavali. They also performed a beautiful dance. The teacher told the students to celebrate the festival of Deepavali traditionally and cautiously.
ಬೆಂಗಳೂರು, ಅ. 30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ದೀಪಾವಳಿಯನ್ನು ಮತ್ತು ಸರದಾರ್ ವಲ್ಲಭ ಭಾಯ್ ಪಟೇಲ್ ಜಯಂತಿಯ ಅಂಗವಾಗಿ ‘ರಾಷ್ಟ್ರೀಯ ಏಕತಾ ದಿವಸ’ವನ್ನು ಆಚರಿಸಲಾಯಿತು.ವಿದ್ಯಾರ್ಥಿಗಳು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜೀವನ ಮತ್ತು ಸಾಧನೆಯ ಕುರಿತು ಮಾತನಾಡಿದರು. ಪ್ರಮಾಣವಚನವನ್ನು ಸ್ವೀಕರಿಸುವ ಮೂಲಕ ಸರ್ದಾರ್ ವಲ್ಲಭಭಾಯ್ ಪಟೇಲರಿಗೆ ಗೌರವವನ್ನು ಸಲ್ಲಿಸಲಾಯಿತು.ದೀಪಾವಳಿ ಹಬ್ಬದ ಆಚರಣೆಯ ಪ್ರಯುಕ್ತ ದೀಪಾವಳಿ ಹಬ್ಬದ ಆಚರಣೆ, ರೀತಿ ನೀತಿಗಳು, ಮಹತ್ತ್ವ, ಇವೆಲ್ಲವನ್ನೂ ವಿದ್ಯಾರ್ಥಿಗಳು ತಿಳಿಸಿದರು. ದೀಪಾವಳಿಯ ವಾತಾವರಣವನ್ನು ಬಿಂಬಿಸುವ ಸುಮಧುರವಾದ ಸಮೂಹಗೀತೆಯನ್ನು ವಿದ್ಯಾರ್ಥಿಗಳು ಹಾಡಿದರು. ಹಾಗೆಯೇ ಸುಂದರವಾದ ನೃತ್ಯವನ್ನು ಪ್ರದರ್ಶಿಸಿದರು. ದೀಪಾವಳಿ ಹಬ್ಬವನ್ನು ಸಾಂಪ್ರದಾಯಿಕವಾಗಿ, ಜಾಗರೂಕತೆಯಿಂದ ಆಚರಿಸುವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.