[vc_row][vc_column][vc_column_text css=””]Home > News & Events >Ganesha Chaturthi Celebration in RVK – Banashankari[/vc_column_text][/vc_column][/vc_row][vc_row equal_height=”yes”][vc_column width=”1/2″][vc_images_carousel images=”5591,5592,5593,5594,5595,5596,5597,5598,5599,5600,5601,5602,5603,5604,5605,5606,5607″ img_size=”full” css=””][/vc_column][vc_column width=”1/2″][vc_column_text css=””]Bengaluru, Aug. 28-01: The installation of Gauri and Ganesha was done in a ceremonial manner herein Rashtrotthana Vidya Kendra – Banashankari. Under the guidance of the priests, the school correspondent Sri Vasanth Kumar performed the puja rituals. On 29/8/25 and 30/8/25, after the school prayers, the teachers of the Sanskrit department performed the puja. Ganesha bhajan was also performed. Ganesh festival was celebrated by offering naivedya and performing puja rituals for five days.On Monday, 1/9/25, during the morning prayer time, Ganesha was worshipped and then Ganesha visarjan was performed. The fully decorated Ganesha was paraded along with Gauri on all the floors of the school. On this occasion, students and teachers raised the Jaya Ghosh, offered flowers and danced. Then, Gauri and Ganesh were immersed in water with the rituals of worship. Selected students from various classes explained the importance of the Ganesh festival and the rituals of worship. The students entertained everyone with songs and dances. Prasad was distributed to everyone. A special bhajan session was organized for the teachers. Apart from giving an opportunity to the supporting staff to participate in the Ganesh worship, the students offered Gauri Bagina to them and paid tribute to their service.Parents were also allowed to watch Ganesha. In addition, the mothers of the Mathrubharati team came to the school and performed Ganesh worship and bhajans.

ಬೆಂಗಳೂರು, ಆ. 28-01: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಶಾಸ್ತ್ರೋಕ್ತವಾಗಿ ಗೌರಿ ಮತ್ತು ಗಣೇಶನ ಪ್ರತಿಷ್ಠಾಪನೆಯನ್ನು ಮಾಡಲಾಯಿತು. ಪುರೋಹಿತರ ಮಾರ್ಗದರ್ಶನದಲ್ಲಿ ಶಾಲಾ ಕರೆಸ್ಪಾಂಡೆಂಟ್ ಶ್ರೀ ವಸಂತ್ ಕುಮಾರ್ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ದಿನಾಂಕ 29/8/25 ಹಾಗೂ 30/8/25 ರಂದು ಶಾಲಾ ಪ್ರಾರ್ಥನೆಯ ನಂತರ ಸಂಸ್ಕೃತ ವಿಭಾಗದ ಶಿಕ್ಷಕರು ಪೂಜಾ ಕಾರ್ಯವನ್ನು ನೆರವೇರಿಸಿದರು. ಜೊತೆಗೆ ಗಣೇಶ ಭಜನೆಯನ್ನು ಮಾಡಲಾಯಿತು. ಐದು ದಿನಗಳ ಕಾಲ ನೈವೇದ್ಯವನ್ನು ಅರ್ಪಿಸಿ, ಪೂಜಾ ಕೈಂಕರ್ಯಗಳನ್ನು ಸಲ್ಲಿಸಿ ಗಣೇಶೋತ್ಸವವನ್ನು ಆಚರಿಸಲಾಯಿತು. ದಿನಾಂಕ 1/9/25 ಸೋಮವಾರದಂದು ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಗಣೇಶನಿಗೆ ಪೂಜೆಯನ್ನು ಸಲ್ಲಿಸಿ ನಂತರ ಗಣೇಶ ವಿಸರ್ಜನೆಯನ್ನು ನೆರವೇರಿಸಲಾಯಿತು. ಸರ್ವಾಲಂಕೃತ ಗಣೇಶನನ್ನು ಗೌರಿಯೊಂದಿಗೆ ಶಾಲೆಯ ಎಲ್ಲ ಮಹಡಿಗಳಲ್ಲೂ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜಯ ಘೋಷವನ್ನು ಹಾಕುತ್ತಾ, ಪುಷ್ಪಾರ್ಚನೆಗೈದು ನರ್ತಿಸಿದರು. ನಂತರ ಪೂಜಾ ವಿಧಿ ವಿಧಾನಗಳೊಂದಿಗೆ ಗೌರಿ ಮತ್ತು ಗಣೇಶನನ್ನು ನೀರಿನಲ್ಲಿ ವಿಸರ್ಜಿಸಲಾಯಿತು. ವಿವಿಧ ತರಗತಿಗಳ ಆಯ್ದ ವಿದ್ಯಾರ್ಥಿಗಳು ಗಣೇಶ ಹಬ್ಬದ ಮಹತ್ವವನ್ನು ಮತ್ತು ಪೂಜಾ ವಿಧಿ ವಿಧಾನಗಳನ್ನು ತಿಳಿಸಿಕೊಟ್ಟರು. ಹಾಡು – ನೃತ್ಯಗಳ ಮೂಲಕ ವಿದ್ಯಾರ್ಥಿಗಳು ಎಲ್ಲರನ್ನು ರಂಜಿಸಿದರು. ಎಲ್ಲರಿಗೂ ಪ್ರಸಾದ ವಿತರಣೆಯನ್ನು ಮಾಡಲಾಯಿತು. ಶಿಕ್ಷಕರಿಗೆ ವಿಶೇಷವಾಗಿ ಭಜನಾ ಅವಧಿಯನ್ನು ಏರ್ಪಡಿಸಲಾಗಿತ್ತು. ಗಣೇಶನ ಪೂಜೆಯಲ್ಲಿ ಪಾಲ್ಗೊಳ್ಳಲು ಸಹಾಯಕ ಸಿಬ್ಬಂದಿ ವರ್ಗದವರಿಗೆ ಅವಕಾಶವನ್ನು ಮಾಡಿ ಕೊಟ್ಟಿರುವುದು ಅಲ್ಲದೆ ಅವರಿಗೆ ಗೌರಿ ಬಾಗಿನವನ್ನು ವಿದ್ಯಾರ್ಥಿಗಳು ಅರ್ಪಿಸಿ, ಅವರ ಸೇವೆಗೆ ಈ ಮೂಲಕ ಗೌರವವನ್ನು ಸಲ್ಲಿಸಲಾಯಿತು. ಗಣೇಶನನ್ನು ವೀಕ್ಷಿಸಲು ಪೋಷಕರಿಗೂ ಅವಕಾಶ ಮಾಡಿಕೊಡಲಾಗಿತ್ತು. ಜೊತೆಗೆ ಮಾತೃಭಾರತಿ ತಂಡದ ಮಾತೆಯರು ಶಾಲೆಗೆ ಆಗಮಿಸಿ ಗಣೇಶನ ಪೂಜೆ ಭಜನೆಗಳನ್ನು ನೆರವೇರಿಸಿದರು.[/vc_column_text][/vc_column][/vc_row]