Bengaluru, Sept. 19: Doll Festival was celebrated herein Rashtrotthana Vidya Kendra – Banashankari. All the children brought traditional clothes to school.
The children were shown the importance of Dasara festival through PPT. The teachers had prepared the activity room very neatly for the children to convince them about different subjects. Dashavatara dolls, portraits of Mother Durga and the importance of worship of Mother Saraswati were displayed in the activity room. PKG children came wearing Navadurga costumes. In the auditorium, they sang the song “Kamanabilla Banadanta Dasara Bantu”. LKG and UKG children told their friends more information about Navadurga. All classes of children and teachers celebrated the doll festival with great joy by dancing together.
ಬೆಂಗಳೂರು, ಸೆ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗೊಂಬೆ ಹಬ್ಬವನ್ನು ಆಚರಿಸಲಾಯಿತು. ಮಕ್ಕಳೆಲ್ಲರೂ ಶಾಲೆಗೆ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಬಂದರು. ಮಕ್ಕಳಿಗೆ ದಸರಾ ಹಬ್ಬದ ಆಚರಣೆ ಹಾಗೂ ಪ್ರಾಮುಖ್ಯತೆಯನ್ನು ಪಿಪಿಟಿಯ ಮುಖಾಂತರ ತೋರಿಸಲಾಯಿತು. ಮಕ್ಕಳಿಗಾಗಿ ಶಿಕ್ಷಕರು ಬೇರೆ ಬೇರೆ ವಿಷಯಗಳನ್ನು ಮನವರಿಕೆ ಮಾಡಿಕೊಡುವ ಸಲುವಾಗಿ ಚಟುವಟಿಕೆ ಕೊಠಡಿಯನ್ನು ಬಹಳ ಅಚ್ಚುಕಟ್ಟಾಗಿ ಸಿದ್ಧಪಡಿಸಿದ್ದರು. ದಶಾವತಾರದ ಗೊಂಬೆಗಳು ತಾಯಿ ದುರ್ಗೆಯ ಭಾವಚಿತ್ರ ಹಾಗೂ ತಾಯಿ ಸರಸ್ವತಿಯ ಪೂಜೆಯ ಮಹತ್ವ ಎಲ್ಲವನ್ನು ಚಟುವಟಿಕೆ ಕೊಠಡಿಯಲ್ಲಿ ಪ್ರದರ್ಶಿಸಿದ್ದರು. PKG ಮಕ್ಕಳು ನವದುರ್ಗೆಯರ ವೇಷಭೂಷಣವನ್ನು ಹಾಕಿಕೊಂಡು ಬಂದಿದ್ದರು. ಆಡಿಟೋರಿಯಂ ನಲ್ಲಿ ಕಾಮನಬಿಲ್ಲ ಬಣ್ಣದಂತ ದಸರಾ ಬಂತು ಎಂಬ ಹಾಡನ್ನು ಹಾಡಿದರು. LKG ಮತ್ತು UKG ಮಕ್ಕಳು ನವದುರ್ಗೆಯರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಮ್ಮ ಸ್ನೇಹಿತರಿಗೆ ಹೇಳಿದರು. ಎಲ್ಲಾ ವರ್ಗದ ಮಕ್ಕಳು ಹಾಗೂ ಶಿಕ್ಷಕಿಯರು ಸೇರಿ ನೃತ್ಯ ಮಾಡಿ ಗೊಂಬೆ ಹಬ್ಬವನ್ನು ಬಹಳ ಖುಷಿಯಿಂದ ಆಚರಿಸಿದರು.








