Bengaluru, Dec. 21: Students of Rashtrotthana Vidya Kendra – Banashankari participated in the Annual Bhagavad Gita Shloka Competition – 2025 organized by Chinmaya Mission at Chinmaya Vidyalaya, Banashankari. Students from various schools participated in this competition, and students of RVK – Banashankari showcased their talent and won many prizes. RVK – Banashankari won the runner-up trophy. Senior Sanskrit teachers of the school, Smt. Sharada and Smt. Vedavati N., who have rendered selfless service for many years in the study and teaching of Bhagavad Gita, were felicitated by Chinmaya Mission.

ಬೆಂಗಳೂರು, ಡಿ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳು ಚಿನ್ಮಯ ವಿದ್ಯಾಲಯ, ಬನಶಂಕರಿಯಲ್ಲಿ ಚಿನ್ಮಯ ಮಿಷನ್ ಆಯೋಜಿಸಿದ್ದ ವಾರ್ಷಿಕ ಭಗವದ್ಗೀತೆ ಶ್ಲೋಕ ಸ್ಪರ್ಧೆ – 2025ರಲ್ಲಿ ಭಾಗವಹಿಸಿದರು. ಈ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ರಾ.ವಿ.ಕೆ – ಬನಶಂಕರಿಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಹಲವು ಬಹುಮಾನಗಳನ್ನು ಗಳಿಸಿದರು. ರಾ.ವಿ.ಕೆ. – ಬನಶಂಕರಿಗೆ ರನ್ನರ್-ಅಪ್ ಟ್ರೋಫಿ ಲಭಿಸಿದೆ. ಭಗವದ್ಗೀತೆಯ ಅಧ್ಯಯನ ಮತ್ತು ಬೋಧನೆಯಲ್ಲಿ ಅನೇಕ ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ ಶಾಲೆಯ ಹಿರಿಯ ಸಂಸ್ಕೃತ ಶಿಕ್ಷಕರಾದ ಶ್ರೀಮತಿ ಶಾರದಾ ಹಾಗೂ ಶ್ರೀಮತಿ ವೇದಾವತಿ ಎನ್. ಅವರನ್ನು ಚಿನ್ಮಯ ಮಿಷನ್ ವತಿಯಿಂದ ಸನ್ಮಾನಿಸಲಾಯಿತು.