Bengaluru, Dec. 31: Flower Day was celebrated herein Rashtrotthana Vidya Kendra – Banashankari. The children were asked to bring various flowers. The teachers had beautifully prepared a Activity room for the children. In it, real flowers were arranged for the children to display. The Pre-KG children sang a song melodiously about Flower Day. The UKG and LKG children performed a dance to the song about various products made from flowers. The Principal, Smt. Nanda, addressed the children about information about flowers. The children were given more information about flowers through PPT. Children of all classes made a beautiful Pookolam by placing flowers in the space reserved for them in the square.

ಬೆಂಗಳೂರು, ಡಿ. 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಹೂವುಗಳ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳಿಗೆ ವಿವಿಧ ಹೂಗಳನ್ನು ತರಲು ತಿಳಿಸಲಾಗಿತ್ತು. ಶಿಕ್ಷಕರು ಮಕ್ಕಳಿಗಾಗಿ ಚಟುವಟಿಕಾ ಕೊಠಡಿಯನ್ನು ಸುಂದರವಾಗಿ ತಯಾರಿಸಿದ್ದರು. ಅದರಲ್ಲಿ ನೈಜ ಹೂವುಗಳನ್ನು ಮಕ್ಕಳಿಗೆ ಪ್ರದರ್ಶನಕ್ಕಾಗಿ ಜೋಡಿಸಿದ್ದರು. ಪ್ರಿಕೆಜಿ ಮಕ್ಕಳು ಹೂವಿನ ದಿನಾಚರಣೆ ಬಗ್ಗೆ ಶುಶ್ರಾವ್ಯವಾಗಿ ಹಾಡನ್ನು ಹಾಡಿದರು. ಹೂವಿನಿಂದ ತಯಾರಿಸುವ ವಿವಿಧ ಉತ್ಪನ್ನಗಳ ಬಗ್ಗೆ ಯುಕೆಜಿ ಹಾಗೂ ಎಲ್ಕೆಜಿ ಮಕ್ಕಳು ಹೂವಿನ ಹಾಡಿಗೆ ನೃತ್ಯವನ್ನು ಪ್ರದರ್ಶಿಸಿದರು. ಪ್ರಧಾನಾಚಾರ್ಯರಾದ ಶ್ರೀಮತಿ ನಂದ ಅವರು ಹೂಗಳ ಬಗೆಗಿನ ಮಾಹಿತಿಯನ್ನು ಕುರಿತು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಪಿಪಿಟಿ ಮುಖಾಂತರ ಮಕ್ಕಳಿಗೆ ಹೂಗಳ ಬಗೆಗಿನ ಹೆಚ್ಚಿನ ಮಾಹಿತಿಯನ್ನು ನೀಡಲಾಯಿತು. ಚೌಕಾಂಗಣದಲ್ಲಿ ಮೀಸಲಿದ್ದ ಜಾಗದಲ್ಲಿ ಎಲ್ಲಾ ವರ್ಗದ ಮಕ್ಕಳು ಹೂವನ್ನು ಹಾಕಿ ಸುಂದರವಾದ ಪುಕೋಲಂ ಅನ್ನು ಮಾಡಿದರು.