Bengaluru, Jan. 23: Parakram Diwas and Vasant Panchami were celebrated herein Rashtrotthana Vidya Kendra – Banashankari. Students spoke about Netaji Subhash Chandra Bose’s patriotism, valour, and struggle in a touching way. On the occasion of Vasant Panchami, some books were placed in front of Goddess Saraswati and worship was offered. During the worship, all the students sang a bhajan. The students explained the importance of Vasant Panchami. Then the students gave a beautiful dance performance. After the prayer meeting, the students returned to their respective classes and performed Saraswati Puja at the class level as well. In front of the classroom, garlands were tied, rangolis were made, and the picture of Goddess Saraswati was decorated with flowers.Arishina-Kumkuma, flowers, and fruits were offered and a lamp was lit. All the students placed their books in front of the Goddess and participated in the worship. The students sang a bhajan. Finally, prasadam was distributed to everyone.

ಬೆಂಗಳೂರು, ಜ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಪರಾಕ್ರಮ ದಿವಸ ಮತ್ತು ವಸಂತ ಪಂಚಮಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದೇಶಭಕ್ತಿ, ಪರಾಕ್ರಮ, ಹೋರಾಟ ಇವೆಲ್ಲವನ್ನು ಮನಮುಟ್ಟುವಂತೆ ತಿಳಿಸಿದರು. ವಸಂತ ಪಂಚಮಿಯ ಪ್ರಯುಕ್ತ ಸರಸ್ವತಿ ದೇವಿಯ ಮುಂದೆ ಕೆಲವು ಪುಸ್ತಕವನ್ನಿಟ್ಟು ಪೂಜೆ ಸಲ್ಲಿಸಲಾಯಿತು. ಪೂಜೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳೆಲ್ಲರೂ ಭಜನೆಯನ್ನು ಹಾಡಿದರು. ವಿದ್ಯಾರ್ಥಿಗಳು ವಸಂತ ಪಂಚಮಿಯ ಮಹತ್ವವನ್ನು ವಿವರಿಸಿದರು. ನಂತರ ವಿದ್ಯಾರ್ಥಿಗಳು ಸುಂದರವಾದ ನೃತ್ಯ ಪ್ರದರ್ಶನ ನೀಡಿದರು. ಪ್ರಾರ್ಥನಾ ಸಭೆಯ ಪೂಜೆಯ ನಂತರ ವಿದ್ಯಾರ್ಥಿಗಳು ತಮ್ಮ ತಮ್ಮ ತರಗತಿಗಳಿಗೆ ಹಿಂತಿರುಗಿ ತರಗತಿ ಮಟ್ಟದಲ್ಲಿಯೂ ಸರಸ್ವತಿ ಪೂಜೆಯನ್ನು ನೆರವೇರಿಸಿದರು. ತರಗತಿಯ ಮುಂಭಾಗದಲ್ಲಿ ತೋರಣಗಳನ್ನು ಕಟ್ಟಿ, ರಂಗೋಲಿಗಳನ್ನು ಬಿಡಿಸಿ, ಸರಸ್ವತಿ ದೇವಿಯ ಚಿತ್ರವನ್ನು ಹೂವಿನಿಂದ ಅಲಂಕರಿಸಲಾಯಿತು. ಅರಿಶಿನ–ಕುಂಕುಮ, ಹೂ, ಹಣ್ಣುಗಳನ್ನು ಅರ್ಪಿಸಿ ದೀಪವನ್ನು ಬೆಳಗಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಒಂದೊಂದು ಪುಸ್ತಕವನ್ನು ದೇವಿಯ ಮುಂದೆ ಇಟ್ಟು ಪೂಜೆಯಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳು ಭಜನೆಯನ್ನು ಹಾಡಿದರು. ಅಂತಿಮವಾಗಿ ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಯಿತು.