Bengaluru, Feb. 4: Rashtrotthana Vidya Kendra – Banashankari has bagged the DDG Recommendation Prize – Best Institution Award in the evaluation held between Govt and private schools, Karnataka and Goa at the Directorate level (JW Category). Another special aspect of this honour is that RVK has once again proven its academic and co-curricular excellence by winning the ‘Best Institution’ award for two consecutive years.The discipline, dedication and excellent performance of the NCC cadets of RVK- Banashankari, along with the loyal guidance of their teachers and NCC mentor, Smt. Sowmya, is the reward.
The function held at Jyoti Niwas College was graced by the Chief Guest, Air Commodore Shri S. B. Arun Kumar (VSM), Indian Air Force, while the Principal, Smt. Nanda and our school’s NCC mentor, Smt. Sowmya, received the award.
This significant achievement is a testament to the leadership, patriotism and personality development of all NCC students of RVK-Banashankari.

ಬೆಂಗಳೂರು, ಫೆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯು ಸರ್ಕಾರ ಮತ್ತು ಖಾಸಗಿ ಶಾಲೆಗಳ ಮಧ್ಯೆ, ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ಮಟ್ಟದಲ್ಲಿ (JW ವರ್ಗ) ನಡೆದ ಮೌಲ್ಯಮಾಪನದಲ್ಲಿ DDG ಶಿಫಾರಸ್ಸಿನ ಬಹುಮಾನ – ಶ್ರೇಷ್ಠ ಸಂಸ್ಥೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಗೌರವಕ್ಕೆ ಮತ್ತೊಂದು ವಿಶೇಷ ಅಂಶವೆಂದರೆ, ನಿರಂತರವಾಗಿ ಎರಡು ವರ್ಷಗಳ ಕಾಲ ‘ಶ್ರೇಷ್ಠ ಸಂಸ್ಥೆ’ ಪ್ರಶಸ್ತಿಯನ್ನು ಪಡೆದು RVK ತನ್ನ ಶೈಕ್ಷಣಿಕ ಹಾಗೂ ಸಹಶೈಕ್ಷಣಿಕ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಎನ್‌ಸಿಸಿ ಕ್ಯಾಡೆಟ್‌ಗಳ ಶಿಸ್ತು, ಸಮರ್ಪಣೆ ಮತ್ತು ಶ್ರೇಷ್ಠ ಕಾರ್ಯಕ್ಷಮತೆ, ಜೊತೆಗೆ ಶಿಕ್ಷಕರು ಹಾಗೂ ಎನ್‌ಸಿಸಿ ಮಾರ್ಗದರ್ಶಕರಾದ ಶ್ರೀಮತಿ ಸೌಮ್ಯ ಅವರ ನಿಷ್ಠಾವಂತ ಮಾರ್ಗದರ್ಶನಕ್ಕೆ ದೊರೆತ ಪ್ರತಿಫಲವಾಗಿದೆ. ಜ್ಯೋತಿ ನಿವಾಸ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾರತೀಯ ವಾಯುಸೇನೆಯ ಏರ್ ಕಮೋಡೋರ್ ಶ್ರೀ ಎಸ್. ಬಿ. ಅರುಣ್ ಕುಮಾರ್ (VSM) ಅವರು ಉಪಸ್ಥಿತರಿದ್ದು, ಪ್ರಧಾನಾಚಾರ್ಯರಾದ ಶ್ರೀಮತಿ ನಂದ ಮತ್ತು ನಮ್ಮ ಶಾಲೆಯ ಎನ್‌ಸಿಸಿ ಮಾರ್ಗದರ್ಶಕರಾದ ಶ್ರೀಮತಿ ಸೌಮ್ಯ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಮಹತ್ವದ ಸಾಧನೆ ರಾವಿಕೇ – ಬನಶಂಕರಿಯ ಎಲ್ಲಾ ಎನ್‌ಸಿಸಿ ವಿದ್ಯಾರ್ಥಿಗಳ ನಾಯಕತ್ವ, ದೇಶಭಕ್ತಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಾಕ್ಷಿಯಾಗಿದೆ.