Bengaluru, Feb. 8: During the 60th anniversary celebrations of the Rashtrotthana Parishat, the Matrubharti Mothers from Rashtrotthana Vidya Kendra – Banashankari, under the leadership of Pradhancharya Smt. Nanda, paid a visit to an institution named Nele Nivedita. They engaged in meaningful discussions with the residents and enjoyed a warm conversation. Additionally, they gained insights into the residents’ way of life, the challenges they encounter, and the provisions in place. Everyone sincerely valued the efforts of Warden Smt. Pramoda, who has been at the helm of this institution for nearly nineteen years, dedicating her life to altruistic service. During this event, the Pradhanacharya and Matrabharati mothers demonstrated their compassion by providing their utmost assistance and contributions.
ಬೆಂಗಳೂರು, ಫೆ. 8: ರಾಷ್ಟ್ರೋತ್ಥಾನ ಪರಿಷತ್ತಿನ 60ನೇ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಮಾತೃಭಾರತಿಯ ಮಾತೆಯರು ಪ್ರಧಾನಾಚಾರ್ಯರಾದ ಶ್ರೀಮತಿ ನಂದ ಅವರ ಮಾರ್ಗದರ್ಶನದಲ್ಲಿ, ನೆಲೆ ನಿವೇದಿತಾ ಎಂಬ ಸಂಸ್ಥೆಯನ್ನು ಭೇಟಿ ಮಾಡಿದರು. ಅಲ್ಲಿ ವಾಸಿಸುತ್ತಿರುವವರೊಂದಿಗೆ ತುಸು ಸಮಯ ಕಳೆದು ಆತ್ಮೀಯ ಸಂಭಾಷಣೆ ನಡೆಸಿದರು. ಜೊತೆಗೆ ಅಲ್ಲಿ ಆಶ್ರಯ ಪಡೆಯುತ್ತಿರುವವರ ಜೀವನ ಶೈಲಿ, ಅವರಿಗೆ ಎದುರಾಗುತ್ತಿರುವ ಸಮಸ್ಯೆಗಳು ಹಾಗೂ ಅಲ್ಲಿನ ವ್ಯವಸ್ಥೆಗಳ ಕುರಿತು ತಿಳಿದುಕೊಂಡರು. ಸುಮಾರು ಹತ್ತೊಂಬತ್ತು ವರ್ಷಗಳಿಂದ ಈ ಸಂಸ್ಥೆಯನ್ನು ನಿಷ್ಠೆಯಿಂದ ಮುನ್ನಡೆಸುತ್ತಾ, ತಮ್ಮ ಜೀವನವನ್ನೇ ನಿಸ್ವಾರ್ಥ ಸೇವೆಗೆ ಅರ್ಪಿಸಿಕೊಂಡಿರುವ ವಾರ್ಡನ್ ಶ್ರೀಮತಿ ಪ್ರಮೋದಾ ಅವರ ಸೇವಾಭಾವನೆಯನ್ನು ಎಲ್ಲರೂ ಹೃದಯಪೂರ್ವಕವಾಗಿ ಮೆಚ್ಚಿಕೊಂಡರು. ಈ ಸಂದರ್ಭದಲ್ಲಿ ಪ್ರಧಾನಾಚಾರ್ಯರು ಹಾಗೂ ಅನೇಕ ಮಾತೆಯರು ತಮ್ಮ ಕೈಲಾದಷ್ಟು ಸಹಾಯ ಹಾಗೂ ಕೊಡುಗೆಯನ್ನು ನೀಡಿ ಮಾನವೀಯತೆಯನ್ನು ಮೆರೆದರು.


