Bengaluru, Feb. 10: The Vahini closing ceremony was organized herein Rashtrotthana Vidya Kendra – Banashankari. Atula Vahini was declared the winning channel based on the marks scored by the students in various activities held throughout the year. The leader team selected through the student election returned their channel flag to the Principal. The school student leader and leader shared their experiences and the students expressed their feelings about the leaders. On this occasion, the NCC students who brought the school the honor of being a top institution were praised and honoured.

ಬೆಂಗಳೂರು, ಫೆ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವಾಹಿನಿ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು. ವರ್ಷಪೂರ್ತಿ ನಡೆದ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಅತುಲ ವಾಹಿನಿಯನ್ನು ವಿಜೇತ ವಾಹಿನಿಯಾಗಿ ಘೋಷಿಸಲಾಯಿತು. ವಿದ್ಯಾರ್ಥಿ ಚುನಾವಣೆಯ ಮೂಲಕ ಆಯ್ಕೆಯಾದ ನಾಯಕ ತಂಡದವರು ತಮ್ಮ ವಾಹಿನಿ ಧ್ವಜವನ್ನು ಪ್ರಧಾನಾಚಾರ್ಯರಿಗೆ ಹಿಂದಿರುಗಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಮತ್ತು ನಾಯಕಿ ತಮ್ಮ ಅನುಭವಗಳನ್ನು ಹಂಚಿಕೊಂಡರು ಹಾಗೂ ವಿದ್ಯಾರ್ಥಿಗಳು ನಾಯಕರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆಗೆ ಅತ್ಯುನ್ನತ ಸಂಸ್ಥೆ ಎಂಬ ಗೌರವ ತಂದುಕೊಟ್ಟ ಎನ್‌ಸಿಸಿ ವಿದ್ಯಾರ್ಥಿನಿಯರನ್ನು ಪ್ರಶಂಸಿಸಿ ಗೌರವಿಸಲಾಯಿತು.