Bengaluru, May 28: A Vidyarambha program was organised for newly enrolled children from UKG to Class 10 at Rashtrotthana Vidya Kendra – Banashankari at Godhuli Muhurat. The program was graced by the divine presence of Sri Sri Sri Jayendra Puri Mahaswami.
• As part of the program, the school was decorated with rangoli and garlands.
The program began with Saraswati Puja.
• Sri Sri Sri Jayendra Puri Mahaswamiji, who was graced by the divine presence, was welcomed to the stage with a full kumbh.
• The program began with prayers and a beautiful dance by school children.
In his introductory speech, Sri Vasanth Kumar spoke about the importance of Bharat Bharati books, the path taken by the Parishat and the value-based education being provided in schools.
• Sri Sri Sri Jayendra Puri Mahaswamy started the school by reciting shlokas to the children.
• In his blessing, he said, “We are born in India, a country that removes darkness from life and gives light.” He advised everyone to live a happy life, free from diseases and free from diseases.
• He praised the Rashtrotthana schools for their work in instilling patriotism, self-confidence and self-respect, thus producing good citizens for the society.
• He advised everyone to preserve and respect the culture that has grown over millions of years, our eternal culture.
• All the children, parents and school staff received the blessings of the Guru.
• Gifts and prasad were given to all the children who participated in this program.
ಬೆಂಗಳೂರು, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗೋಧೂಳಿ ಮುಹೂರ್ತದಲ್ಲಿ ಯುಕೆಜಿ ಇಂದ 10ನೇ ತರಗತಿಯವರೆಗೆ ಹೊಸದಾಗಿ ದಾಖಲಾಗಿರುವ ಮಕ್ಕಳಿಗೆ ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಶ್ರೀ ಶ್ರೀ ಶ್ರೀ ಜಯೇಂದ್ರ ಪೂರಿ ಮಹಾಸ್ವಾಮೀಗಳ ದಿವ್ಯ ಸಾನ್ನಿಧ್ಯ ದೊರಕಿತ್ತು.
• ಕಾರ್ಯಕ್ರಮದ ಅಂಗವಾಗಿ ಶಾಲೆಯನ್ನು ರಂಗೋಲಿ ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
• ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
• ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಶ್ರೀ ಶ್ರೀ ಜಯೇಂದ್ರ ಪೂರಿ ಮಹಾ ಸ್ವಾಮೀಜಿ ಅವರನ್ನು ಪೂರ್ಣ ಕುಂಭದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
• ಶಾಲಾ ಮಕ್ಕಳ ಪ್ರಾರ್ಥನೆ ಹಾಗೂ ಸುಂದರವಾದ ನೃತ್ಯದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
• ಶ್ರೀ ವಸಂತ್ ಕುಮಾರ್ ಅವರು ತಮ್ಮ ಪ್ರಸ್ತಾವನೆ ನುಡಿಯಲ್ಲಿ ಭಾರತ ಭಾರತಿ ಪುಸ್ತಕಗಳ ಮಹತ್ವ, ಪರಿಷತ್ತು ನಡೆದು ಬಂದ ದಾರಿ ಹಾಗೂ ಶಾಲೆಗಳಲ್ಲಿ ನೀಡುತ್ತಿರುವ ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ತಿಳಿಸಿದರು.
• ಶ್ರೀ ಶ್ರೀ ಶ್ರೀ ಜಯೇಂದ್ರ ಪೂರಿ ಮಹಾಸ್ವಾಮಿಗಳು ಮಕ್ಕಳಿಗೆ ಶ್ಲೋಕಗಳನ್ನು ಹೇಳಿಕೊಡುವ ಮೂಲಕ ವಿದ್ಯಾರಂಭವನ್ನು ಪ್ರಾರಂಭಿಸಿದರು.
• ತಮ್ಮ ಆಶೀರ್ವಚನದಲ್ಲಿ “ನಾವು ಜೀವನದಲ್ಲಿ ಕತ್ತಲನ್ನು ದೂರ ಮಾಡಿ, ಬೆಳಕನ್ನು ನೀಡುವ ಭಾರತ ದೇಶದಲ್ಲಿ ಜನಿಸಿದ್ದೇವೆ” ಎಂದು ಹೇಳಿದರು. ನಿರಾಳವಾಗಿ, ರೋಗ ಮುಕ್ತರಾಗಿ ಎಲ್ಲರೂ ಸುಖಕರ ಜೀವನವನ್ನು ನಡೆಸಬೇಕೆಂದು ಸಲಹೆ ನೀಡಿದರು.
• ರಾಷ್ಟ್ರೋತ್ಥಾನ ಶಾಲೆಗಳು ದೇಶಾಭಿಮಾನ, ಆತ್ಮವಿಶ್ವಾಸ, ಸ್ವಾಭಿಮಾನವನ್ನು ಮೂಡಿಸುವ ಕೆಲಸದೊಂದಿಗೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತವೆ ಎಂದು ಶ್ಲಾಘಿಸಿದರು.
• ಲಕ್ಷಾಂತರ ವರ್ಷಗಳಿಂದ ಬೆಳೆದು ಬಂದ ಸಂಸ್ಕೃತಿ ನಮ್ಮ ಸನಾತನ ಸಂಸ್ಕೃತಿ ಅದನ್ನು ಎಲ್ಲರೂ ಉಳಿಸಿ ಬೆಳೆಸಿ ಗೌರವಿಸಬೇಕೆಂದು ಸಲಹೆಗಳನ್ನು ನೀಡಿದರು.
• ಎಲ್ಲಾ ಮಕ್ಕಳು, ಪೋಷಕರು ಹಾಗೂ ಶಾಲಾ ಸಿಬ್ಬಂದಿಯವರು ಗುರುಗಳ ಆಶೀರ್ವಾದವನ್ನು ಪಡೆದರು.
• ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಉಡುಗೊರೆ ಮತ್ತು ಪ್ರಸಾದವನ್ನು ನೀಡಲಾಯಿತು.










