Bengaluru, June 20: The 12th International Yoga Day was celebrated herein Rashtrotthana Vidya Kendra – Banashankari. Dr. Malathi Vivek, Joint Secretary of the Indian Yoga Association, was the Chief Guest. The students sang the Yoga Geeta melodiously. The importance of International Yoga Day was presented. The school principal, Smt. Yashoda, gave the Sankalpa to everyone. The school children performed yoga dance. Students from a nearby government school performed yoga. Then a group yoga practice was conducted under the guidance of Smt. Premalatha. The students enthusiastically performed yoga asanas. Students from a nearby government school actively participated in the program and practiced yoga. The Chief Guest, Dr. Malathi Vivek, said that yoga is good for health. Yoga is important for keeping the body and mind in balance. Doing yoga, sleep and pranayama every day reduces stress. Everyone should know their strengths and weaknesses. They should overcome their shortcomings, he said. Later, teachers from nearby government schools were honoured with mementos.
ಬೆಂಗಳೂರು, ಜೂ. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾರತೀಯ ಯೋಗ ಅಸೋಸಿಯೇಷನ್ ನ ಜಂಟಿ ಕಾರ್ಯದರ್ಶಿಯಾಗಿರುವ ಡಾ. ಮಾಲತಿ ವಿವೇಕ್ ಅವರು ಆಗಮಿಸಿದ್ದರು. ವಿದ್ಯಾರ್ಥಿಗಳು ಯೋಗ ಗೀತೆಯನ್ನು ಸುಮಧುರವಾಗಿ ಹಾಡಿದರು. ಅಂತರರಾಷ್ಟ್ರೀಯ ಯೋಗ ದಿನದ ಮಹತ್ವವನ್ನು ಪ್ರಸ್ತುತಪಡಿಸಲಾಯಿತು.
ಶಾಲೆಯ ಪ್ರಮುಖರಾದ ಶ್ರೀಮತಿ ಯಶೋದಾ ಅವರು ಎಲ್ಲರಿಗೂ ಸಂಕಲ್ಪವನ್ನು ನೀಡಿದರು. ಶಾಲಾ ಮಕ್ಕಳು ಯೋಗ ನೃತ್ಯವನ್ನು ಪ್ರದರ್ಶಿದರು. ಹತ್ತಿರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಯೋಗವನ್ನು ಪ್ರದರ್ಶಿಸಿದರು. ನಂತರ ಸಾಮೂಹಿಕ ಯೋಗಾಭ್ಯಾಸವನ್ನು ಶ್ರೀಮತಿ ಪ್ರೇಮಲತಾ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಯೋಗಾಸನಗಳನ್ನು ಮಾಡಿದರು. ಸಮೀಪದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯೋಗಭ್ಯಾಸವನ್ನು ಮಾಡಿದರು. ಮುಖ್ಯ ಅತಿಥಿಗಳಾದ ಡಾ. ಮಾಲತಿ ವಿವೇಕ್ ರವರು ಯೋಗ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ದೇಹ ಹಾಗೂ ಮನಸ್ಸನ್ನು ಸಮತೋಲನದಲ್ಲಿಡಲು ಯೋಗ ಮುಖ್ಯ. ಪ್ರತಿದಿನ ಯೋಗ ನಿದ್ರೆ ಹಾಗೂ ಪ್ರಾಣಾಯಾಮ ಮಾಡುವುದರಿಂದ ಒತ್ತಡ ಕಡಿಮೆ ಆಗುತ್ತದೆ. ಪ್ರತಿಯೊಬ್ಬರು ನಿಮ್ಮ ಶಕ್ತಿ ಹಾಗೂ ದೌರ್ಬಲ್ಯಗಳನ್ನು ತಿಳಿಯಬೇಕು. ಕೊರತೆಗಳನ್ನು ನಿವಾರಿಸಿಕೊಳ್ಳಬೇಕು ಎಂದು ತಿಳಿಸಿದರು. ನಂತರ ಸಮೀಪದ ಸರ್ಕಾರಿ ಶಾಲಾ ಶಿಕ್ಷಕರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.











