Bengaluru, June 19: An environment festival was celebrated herein Rashtrotthana Vidya Kendra – Banashankari. The festival began with a children’s procession. Pre-KG children wore tree costumes representing the environment. LKG children wore water costumes to represent the slogan “Save water by conserving water”. UKG children wore animal and bird costumes to show that animals are a part of the environment. The procession started from the school premises and from there the children paraded up to the first-floor shouting slogans about the environment. Then they celebrated by shouting many slogans in the presence of Principal Smt. Nanda and Vice Principal Smt. Sandhya. Various concepts were arranged in the Chatuvatika room to show the children as part of the environment festival. In it, they showed how to dispose of green waste and dry waste. Trees should not be cut; trees should be planted. Similarly, plastic bags should not be used and the presence of Brahma, Vishnu and Maheshwar in the Ashwat tree was explained. A selfie corner was made using the theme “Rice in Garbage” And the activity of Pre-KG children hugging trees LKG children watering plants and UKG children walking in a flower garden, such activities were done by the children. Bird feeders were given to Pre-KG children, fenugreek seedlings to LKG children and seed balls to UKG children as gifts to the children
ಬೆಂಗಳೂರು, ಜೂ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಪರಿಸರ ಉತ್ಸವವನ್ನು ಆಚರಿಸಲಾಯಿತು. ಉತ್ಸವವು ಮಕ್ಕಳ ಪಥಸಂಚಲನದಿಂದ ಆರಂಭವಾಯಿತು. ಪ್ರೀ ಕೆ ಜಿ ಮಕ್ಕಳು ಪರಿಸರವನ್ನು ಪ್ರತಿನಿಧಿಸುವ ಮರಗಳ ಪೋಷಾಕನ್ನು ಧರಿಸಿದ್ದರು. ಎಲ್ ಕೆ ಜಿ ಮಕ್ಕಳು ನೀರನ್ನು ಸಂರಕ್ಷಿಸಿ ನೀರನ್ನು ಉಳಿಸಿ ಎನ್ನುವ ವಾಕ್ಯವನ್ನು ಪ್ರತಿನಿಧಿಸಲು ನೀರಿನ ಪೋಷಾಕನ್ನು ಧರಿಸಿದ್ದರು.
ಯು ಕೆ ಜಿ ಮಕ್ಕಳು ಪ್ರಾಣಿಗಳು ಪರಿಸರದ ಒಂದು ಭಾಗ ಎಂದು ತೋರಿಸಲು ಪ್ರಾಣಿಗಳ ಮತ್ತು ಪಕ್ಷಿಗಳ ಪೋಷಾಕು ಧರಿಸಿದ್ದರು. ಪಥಸಂಚಲನವು ಶಾಲೆಯ ಹೊರಾಂಗಣದಿಂದ ಪ್ರಾರಂಭವಾಯಿತು ಅಲ್ಲಿಂದ ಮಕ್ಕಳು ಪರಿಸರವನ್ನು ಕುರಿತು ಘೋಷಣೆಗಳನ್ನು ಕೂಗುತ್ತಾ ಮೊದಲನೇ ಮಹಡಿಯವರೆಗೂ ಪಥಸಂಚಲನ ನಡೆಸಿದರು. ನಂತರ ಪ್ರಧಾನಾಚಾರ್ಯರಾದ ಶ್ರೀಮತಿ ನಂದ ಹಾಗೂ ಉಪ ಪ್ರಧಾನಾಚಾರ್ಯರಾದ ಶ್ರೀಮತಿ ಸಂಧ್ಯಾ ಸಮ್ಮುಖದಲ್ಲಿ ಹಲವು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಚಟುವಟಿಕಾ ಕೊಠಡಿಯಲ್ಲಿ ಪರಿಸರ ಉತ್ಸವದ ಅಂಗವಾಗಿ ಮಕ್ಕಳಿಗೆ ತೋರಿಸಲು ವಿವಿಧ ಪರಿಕಲ್ಪನೆಗಳನ್ನು ಜೋಡಿಸಲಾಗಿತ್ತು. ಅದರಲ್ಲಿ ಹಸಿ ಕಸ ಒಣ ಕಸದ ವಿಲೇವಾರಿಯನ್ನು ಹೇಗೆ ಮಾಡಬೇಕೆಂದು ತೋರಿಸಿದ್ದರು. ಮರವನ್ನು ಕತ್ತರಿಸಬಾರದು ಗಿಡವನ್ನು ನೆಡಬೇಕು. ಹಾಗೆ ಪ್ಲಾಸ್ಟಿಕ್ ಚೀಲಗಳನ್ನು ಬಳಸಬಾರದು ಮತ್ತು ಅಶ್ವತ್ ವೃಕ್ಷದಲ್ಲಿ ಬ್ರಹ್ಮ ವಿಷ್ಣು ಮತ್ತು ಮಹೇಶ್ವರ ಅವರ ಉಪಸ್ಥಿತಿ ಇರುವುದರ ಕುರಿತಾದ ವಿವರಣೆ ನೀಡಲಾಗಿತ್ತು.
“ಕಸದಲ್ಲಿ ರಸ“ ವಿಷಯವನ್ನು ಬಳಸಿ ಸೆಲ್ಫಿ ಕಾರ್ನರ್ ಮಾಡಲಾಗಿತ್ತು ಮತ್ತು ಪ್ರೀ ಕೆ ಜಿ ಮಕ್ಕಳು ಮರಗಳನ್ನು ಅಪ್ಪಿಕೊಳ್ಳುವ ಚಟುವಟಿಕೆ ಎಲ್ ಕೆ ಜಿ ಮಕ್ಕಳು ಗಿಡಕ್ಕೆ ನೀರು ಹಾಕುವ ಚಟುವಟಿಕೆ ಮತ್ತು ಯು ಕೆ ಜಿ ಮಕ್ಕಳು ಹೂದೋಟದಲ್ಲಿ ನಡಿಗೆ, ಈ ರೀತಿ ಚಟುವಟಿಕೆಗಳನ್ನು ಮಕ್ಕಳಿಂದ ಮಾಡಿಸಲಾಯಿತು .ಪ್ರೀ ಕೆ ಜಿ ಮಕ್ಕಳಿಗೆ ಬರ್ಡ್ ಫೀಡರ್, ಎಲ್ ಕೆ ಜಿ ಮಕ್ಕಳಿಗೆ ಮೆಂತೆ ಸಸಿ ಹಾಗೂ ಯು ಕೆ ಜಿ ಮಕ್ಕಳಿಗೆ ಸೀಡ್ ಬಾಲ್ಸ್ ಗಳನ್ನು ಮಕ್ಕಳಿಗೆ ಉಡುಗೊರೆಯಾಗಿ ನೀಡಲಾಯಿತು.









