Bengaluru, June 27: Hindu Samrajya Diwas was celebrated here in Rashtrotthana Vidya Kendra – Banashankari.
• Students talked about Shivaji’s childhood, his mother’s influence, how his mother told him stories of Ramayana and Mahabharata and instilled courage, adventure and values ​​in Shivaji from his childhood, and how Shivaji established the Hindu Empire by fighting against the Mughals. They said that today we are celebrating the day when Shivaji was crowned in Rayagadh under the guidance of his guru Samartha Ramdas as the Hindu Empire Day.
• Children performed a wonderful play on Shivaji.
• The Oath was taken that we will all follow the values ​​of Shivaji’s adventure, sacrifice, service and patriotism.

ಬೆಂಗಳೂರು, ಜೂ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಹಿಂದೂ ಸಾಮ್ರಾಜ್ಯ ದಿನವನ್ನು ಆಚರಿಸಲಾಯಿತು. ಶಾಲಾ ಪ್ರಾರ್ಥನೆಯ
• ಶಿವಾಜಿಯವರ ಬಾಲ್ಯ, ತಾಯಿಯ ಪ್ರಭಾವ, ತಾಯಿಯು ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳಿ ಶಿವಾಜಿಗೆ ಬಾಲ್ಯದಲ್ಲಿಯೇ ಧೈರ್ಯ, ಸಾಹಸ, ಮೌಲ್ಯಗಳನ್ನು ಬೆಳೆಸಿದ್ದು, ಮೊಘಲರ ವಿರುದ್ಧ ಹೋರಾಡಿ ಶಿವಾಜಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದರ ಬಗೆಗೆ ವಿದ್ಯಾರ್ಥಿಗಳು ತಿಳಿಸಿದರು. ಅವರ ಗುರುಗಳಾದ ಸಮರ್ಥ ರಾಮದಾಸರ ಮಾರ್ಗದರ್ಶನದಲ್ಲಿ ಶಿವಾಜಿಯು ರಾಯಗಢದಲ್ಲಿ ಪಟ್ಟಾಭಿಷೇಕವಾದ ದಿನವನ್ನು ಇಂದು ನಾವು ಹಿಂದು ಸಾಮ್ರಾಜ್ಯ ದಿನವಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
• ಮಕ್ಕಳು ಶಿವಾಜಿ ಮಹಾರಾಜರನ್ನು ಕುರಿತ ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿದರು.
• ಶಿವಾಜಿಯವರ ಸಾಹಸ, ತ್ಯಾಗ, ಸೇವೆ, ದೇಶಭಕ್ತಿ ಮೌಲ್ಯಗಳನ್ನು ನಾವೆಲ್ಲರೂ ಅನುಸರಿಸುತ್ತೇವೆ ಎಂದು ಪ್ರಮಾಣವನ್ನು ಸ್ವೀಕರಿಸಲಾಯಿತು.