Bengaluru, Sept. 19: ‘Srujanotsava’ (a celebration of creativity) was organised at Rashtrotthana Vidya Kendra – Banashankari.
- The event was graced by Chief Guests Sri Anand (former Group Director, SPROC Systems/Master Control Facility, ISRO) and Sri Srinivasa Prasad (Scientist, ISRO).
- The Chief Guests were presented with a Tulsi sapling by a robot—an example of modern technology.
- Smt. Sneha explained the activities and operations of the ATL (Atal Tinkering Lab).
- Addressing the students, Chief Guest Sri Anand encouraged them to ask questions, cultivate curiosity, and think creatively. He also advised them to practice time management, formulate plans, achieve both short-term and long-term goals, engage in group learning, and remain active. He further urged them to use their knowledge and skills to contribute to society.
- Subsequently, the Guests visited classrooms across various subject departments and observed the students’ creativity.
- Parents also visited the school to witness and encourage the students’ creative endeavours.
ಬೆಂಗಳೂರು, ಸೆ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಸೃಜನೋತ್ಸವವನ್ನು ಆಯೋಜಿಸಲಾಗಿತ್ತು.
- ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ Former group director SPROC systems, master control facility ISROದಲ್ಲಿ ಕಾರ್ಯನಿರ್ವಹಿಸಿದ ಶ್ರೀ ಆನಂದ್ ರವರು ಹಾಗೂ ಇಸ್ರೋದಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ ಶ್ರೀ ಶ್ರೀನಿವಾಸ ಪ್ರಸಾದ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು.
- ಮುಖ್ಯ ಅತಿಥಿಗಳಿಗೆ ಆಧುನಿಕ ತಂತ್ರಜ್ಞಾನವಾದ ರೋಬೋಟ್ ಮೂಲಕ ತುಳಸಿ ಸಸಿಯನ್ನು ನೀಡಲಾಯಿತು.
- ಶ್ರೀಮತಿ ಸ್ನೇಹ ಅವರು ATL ಲ್ಯಾಬ್ ನ ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು.
- ಮುಖ್ಯ ಅತಿಥಿಗಳಾದ ಶ್ರೀ ಆನಂದರವರು ಮಕ್ಕಳನ್ನು ಉದ್ವೇಶಿಸಿ ಮಾತನಾಡಿ, ಪ್ರಶ್ನೆಗಳನ್ನು ಕೇಳಿ ಕುತೂಹಲಗಳನ್ನು ಬೆಳಸಿಕೊಳ್ಳಿ, ಕ್ರಿಯಾತ್ಮಕವಾಗಿ ಯೋಚಿಸಿ ಎಂದು ತಿಳಿಸಿದರು. ಜೊತೆಗೆ ಸಮಯ ಪಾಲನೆಯನ್ನು ಮಾಡಿ, ಯೋಜನೆಯನ್ನು ರೂಪಿಸಿಕೊಳ್ಳಿ, ಅಲ್ಪಾವಧಿ ಹಾಗೂ ದೀರ್ಘಾವಧಿಯ ಗುರಿಯನ್ನು ತಲುಪಿ, ಗುಂಪು ಕಲಿಕೆಯಲ್ಲಿ ಪಾಲ್ಗೊಳ್ಳಿ ಚಟುವಟಿಕೆಯಿಂದ ಇರಿ. ನಿಮ್ಮ ಜ್ಞಾನ ಹಾಗೂ ಕೌಶಲವನ್ನು ಬಳಸಿ ಸಮಾಜಕ್ಕೆ ಸಹಾಯ ಮಾಡಿ ಎಂದು ಸಲಹೆ ನೀಡಿದರು.
- ನಂತರ ಅತಿಥಿಗಳು ಎಲ್ಲಾ ವಿಷಯ ವಿಭಾಗದ ತರಗತಿಗಳಿಗೆ ಭೇಟಿ ನೀಡಿ ಮಕ್ಕಳ ಸೃಜನಶೀಲತೆಯನ್ನು ವೀಕ್ಷಿಸಿದರು.
- ಪೋಷಕರು ಸಹ ಶಾಲೆಗೆ ಭೇಟಿ ನೀಡಿ ಮಕ್ಕಳ ಕ್ರಿಯಾತ್ಮಕತೆಯನ್ನು ವೀಕ್ಷಿಸಿ ಪ್ರೋತ್ಸಾಹಿಸಿದರು.














