Bengaluru, Jan. 17: A sports festival was held for students in classes 3 to 5 at Rashtrotthana Vidya Kendra – Banashankari. Kumari Neha, a former student of Rashtrotthana Vidya Kendra – Banashankari good sportsman and presently serving as a social media manager, was the chief guest. The sports lamp was ignited, and a procession featuring 4 channels and Ghosh, pathshanchalana was conducted. Students from class 3 showcased a dance performance, while those from class 4 demonstrated their karate skills. The chief guests addressed the audience, reminiscing about their school experiences. Chief Guest and Sri Vasanth Kumar and Smt. Nanda initiated various sports activities by throwing the throw ball. The students participated in the games with great enthusiasm. Abhay Vahini emerged victorious in the game.

ಬೆಂಗಳೂರು, ಜ. 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ 3 ರಿಂದ 5 ನೇ ತರಗತಿಯ ಕ್ರೀಡೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಹಳೆಯ ವಿದ್ಯಾರ್ಥಿಯಾಗಿರುವ ಪ್ರಸ್ತುತ ಸೋಶಿಯಲ್ ಮೀಡಿಯಾ ಮ್ಯಾನೇಜರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿರುವ ಉತ್ತಮ ಕ್ರೀಡಾಪಟು ಕುಮಾರಿ ನೇಹಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಕ್ರೀಡಾ ಜ್ಯೋತಿ ಬೆಳಗಿಸಿ, 4 ವಾಹಿನಿಗಳು ಹಾಗೂ ಘೋಷ್, ಪಥ ಸಂಚಲನವನ್ನು ನಡೆಸಲಾಯಿತು. ಮೂರನೇ ತರಗತಿಯ ಮಕ್ಕಳು ನೃತ್ಯವನ್ನು ಪ್ರಸ್ತುತಪಡಿಸಿದರು. ನಾಲ್ಕನೇ ತರಗತಿಯ ಮಕ್ಕಳು ಕರಾಟೆ ಪ್ರದರ್ಶನವನ್ನು ನೀಡಿದರು. ಮುಖ್ಯ ಅತಿಥಿಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ತಮ್ಮ ಶಾಲಾ ಜೀವನದ ನೆನಪನ್ನು ಹಂಚಿಕೊಂಡರು. ಅತಿಥಿಗಳು ಮತ್ತು ಶ್ರೀ ವಸಂತ್ ಕುಮಾರ್ ಹಾಗು ಶ್ರೀಮತಿ ನಂದಾ ಅವರು ತ್ರೋಬಾಲ್ ಅನ್ನು ಎಸೆಯುವುದರ ಮೂಲಕ ವಿವಿಧ ಕ್ರೀಡೆಗಳಿಗೆ ಚಾಲನೆಯನ್ನು ನೀಡಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಆಟಗಳಲ್ಲಿ ತೊಡಗಿಸಿಕೊಂಡರು. ಆಟದಲ್ಲಿ ಅಭಯವಾಹಿನಿ ಗೆಲುವನ್ನು ಗಳಿಸಿತು.