Bengaluru, Septt. 15: Rashtrotthana Vidya Kendra – Banashankari was celebrated ‘Engineers Day’ on the occasion of Sir M. Vishweshwarayya’s birth anniversary. The students appreciated the importance of this day. Sir Mokshagundam Vishweshwarayya is one of the greatest engineers the world has ever seen. He has been awarded the highest award like ‘Bharat Ratna’ for his contribution to society. The British Government awarded him the title of ‘Sir’. They said that his birthday is celebrated as ‘Engineer’s Day’ across India.

ಬೆಂಗಳೂರು, ಸೆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಜಯಂತಿಯ ಅಂಗವಾಗಿ ಅಭಿಯಂತರರ ದಿನವನ್ನು ಆಚರಿಸಲಾಯಿತು. ನಂತರ ಈ ದಿನದ ಮಹತ್ವವನ್ನು ತಿಳಿಸುತ್ತಾ ದ್ಯಾರ್ಥಿಗಳು ಸರ್ ಎಂ. ವಿ. ಎಂದು ಜನಪ್ರಿಯರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯರವರು ವಿಶ್ವ ಕಂಡ ಶ್ರೇಷ್ಠ ಅಭಿಯಂತರರಲ್ಲಿ ಒಬ್ಬರು. ಇವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಇವರಿಗೆ ‘ಭಾರತ ರತ್ನ’ದಂತಹ ಅತ್ಯುನ್ನತ ಪ್ರಶಸ್ತಿಯು ಲಭ್ಯವಾಗಿದೆ. ಹಾಗೆಯೇ ಬ್ರಿಟಿಷ್ ಸರ್ಕಾರವು ‘ಸರ್’ ಎಂಬ ಪದವಿಯನ್ನು ನೀಡಿ ಗೌರವಿಸಿದೆ. ಇವರು ಹುಟ್ಟಿದ ದಿನವನ್ನು ಭಾರತ ದೇಶದಾದ್ಯಂತ ‘ಅಭಿಯಂತರ ದಿನ’ ಎಂದು ಆಚರಿಸುತ್ತಾರೆ ಎಂದು ಹೇಳಿದರು.