Banashankari, Sept. 10: Children of Gokulam celebrated Fruits Day herein Rashtrotthana Vidya Kendra – Banashankari. The teachers had prepared different topics for the children in the activity room. In which, the topics of ‘Mango Fair, Fruit Market, Fruit Juices are Healthy’ were presented to the children. The mythological story ‘Fruits of Wisdom’ was also presented in the Chatuvatika room. In the auditorium, children of all classes sang the song ‘I am an Apple……’ very well. Pre-KG children wore fruit hanging plaques and told information about fruits. The teachers and children of all classes danced to the song of fruits and enjoyed themselves. All the fruits brought by the children were displayed in the activity room and then given to the Tapas students studying in the school.

ಬನಶಂಕರಿ, ಸೆ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗೋಕುಲಂ ಮಕ್ಕಳು ಹಣ್ಣುಗಳ ದಿನಾಚರಣೆಯನ್ನು ಆಚರಿಸಿದರು. ಶಿಕ್ಷಕರು ಮಕ್ಕಳಿಗಾಗಿ ಚಟುವಟಿಕೆ ಕೊಠಡಿಯನ್ನು ವಿಭಿನ್ನ ವಿಷಯಗಳನ್ನು ಮಕ್ಕಳಿಗಾಗಿ ತಯಾರಿಸಿದ್ದರು. ಅದರಲ್ಲಿ ʼಮಾವಿನ ಮೇಳ, ಹಣ್ಣುಗಳ ಮಾರುಕಟ್ಟೆ, ಹಣ್ಣಿನ ರಸಗಳು ಆರೋಗ್ಯಕರʼ ಎಂಬ ವಿಷಯವನ್ನು ಮಕ್ಕಳಿಗೆ ಪ್ರಸ್ತುತಪಡಿಸಿದರು. ʼಫ್ರೂಟ್ಸ್ ಆಫ್ ವಿಸ್ಡಂʼ ಪೌರಾಣಿಕ ಕಥೆಯನ್ನು ಕೂಡ ಚಟುವಟಿಕಾ ಕೊಠಡಿಯಲ್ಲಿ ಪ್ರದರ್ಶಿಸಿದ್ದರು. ಆಡಿಟೋರಿಯಂನಲ್ಲಿ ಎಲ್ಲಾ ವರ್ಗದ ಮಕ್ಕಳು ಸೇರಿ ʼI am an Apple……ʼ ಹಾಡನ್ನು ಬಹಳ ಚೆನ್ನಾಗಿ ಹಾಡಿದರು. ಪ್ರಿ-ಕೆಜಿ ಮಕ್ಕಳು ಹಣ್ಣುಗಳ ತೂಗು ತಃಕ್ತೆ ಧರಿಸಿ ಹಣ್ಣುಗಳ ಬಗ್ಗೆ ಮಾಹಿತಿಯನ್ನು ಹೇಳಿದರು. ಶಿಕ್ಷಕಿಯರು ಹಾಗೂ ಎಲ್ಲಾ ವರ್ಗದ ಮಕ್ಕಳು ಸೇರಿ ಹಣ್ಣುಗಳ ಹಾಡಿಗೆ ನೃತ್ಯ ಮಾಡಿ ಖುಷಿಪಟ್ಟರು. ಮಕ್ಕಳಿಂದ ತರಿಸಲಾಗಿದ್ದ ಎಲ್ಲಾ ಹಣ್ಣುಗಳನ್ನು ಚಟುವಟಿಕೆ ಕೊಠಡಿಯಲ್ಲಿ ಪ್ರದರ್ಶಿಸಿ ನಂತರ ಶಾಲೆಯಲ್ಲಿ ಓದುತ್ತಿರುವ ತಪಸ್ ವಿದ್ಯಾರ್ಥಿಗಳಿಗೆ ನೀಡಿದರು.