Karnataka Rajyotsava Celebration in RVK – Banashankari

Bengaluru, Nov. 6: Karnataka Rajyotsava was celebrated herein Rashtrotthana Vidya Kendra – Banashankari. The school premises were decorated with yellow and red Flags, yellow and red Rangavalli and trinkets. The teachers, children and staff wore yellow and red colour dress. Sri Madhu Y N, a writer, columnist and soft-ware developer, was the chief guest for the program. Hoisting of National Flag and National Flag was followed by National Anthem and Nadageete.Students danced to Kannada folk songs in the cultural programme. The farmer song was sung by students. Students performed a short play on the importance of Kannada language and the need to save it.The ranks of NCC students of the school were announced and felicitated.Then the chief guest Sri Madhu Y N spoke about the importance of our language and gave a couple of examples that Kannada language is a beautiful language.

ಬೆಂಗಳೂರು, ನ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲೆಯ ಆವರಣವನ್ನು ಹಳದಿ ಕೆಂಪು ಬಣ್ಣದ ಬಾವುಟಗಳಿಂದ, ಹಳದಿ ಕೆಂಪು ಬಣ್ಣದ ರಂಗವಲ್ಲಿ ಮತ್ತು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶಿಕ್ಷಕರು, ಮಕ್ಕಳು, ಸಿಬ್ಬಂದಿ ವರ್ಗದವರು ಹಳದಿ ಕೆಂಪು ಬಣ್ಣದ ಉಡುಗೆಯನ್ನು ತೊಟ್ಟಿದ್ದರು. ಕಾರ್ಯಕ್ರಮಕ್ಕೆ ಸಾಹಿತಿಗಳು, ಅಂಕಣಕಾರರು ಹಾಗೂ ಅಭಿಯಂತರರು ಆಗಿರುವ ಶ್ರೀಯುತ ಮಧು ವೈ ಎನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ರಾಷ್ಟ್ರಧ್ವಜ ಮತ್ತು ನಾಡಧ್ವಜಾರೋಹಣವನ್ನು ರಾಷ್ಟ್ರಗೀತೆ ಮತ್ತು ನಾಡಗೀತೆಯೊಂದಿಗೆ ನೆರವೇರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕನ್ನಡ ಜನಪದ ಹಾಡುಗಳಿಗೆ ನೃತ್ಯ ಮಾಡಿದರು. ರೈತ ಗೀತೆಯನ್ನು ಹಾಡಿದರು. ಕನ್ನಡ ಭಾಷೆಯ ಮಹತ್ತ್ವವನ್ನು ಮತ್ತು ಅದರ ಉಳಿಸುವಿಕೆಯ ಅಗತ್ಯತೆ ಕುರಿತಂತೆ ಕಿರು ನಾಟಕವನ್ನು ವಿದ್ಯಾರ್ಥಿಗಳು ಅಭಿನಯಿಸಿದರು. ಶಾಲೆಯ ಎನ್‌.ಸಿ.ಸಿ ವಿದ್ಯಾರ್ಥಿಗಳ ಶ್ರೇಣಿಗಳನ್ನು ಘೋಷಿಸಿ ಅವರನ್ನು ಅಭಿನಂದಿಸಲಾಯಿತು. ನಂತರ ಮುಖ್ಯ ಅತಿಥಿಗಳಾದ ಮಧು.ವೈ.ಎನ್. ಅವರು ಮಾತನಾಡುತ್ತ ನಮ್ಮ ಭಾಷೆಯ ಮಹತ್ತ್ವವನ್ನು ತಿಳಿಸಿದರು. ಕನ್ನಡ ಭಾಷೆ ಅಂದದ ಭಾಷೆ ಎಂದು ಸಾಂದರ್ಭಿಕವಾಗಿ ಒಂದೆರಡು ಉದಾಹರಣೆಗಳನ್ನು ನೀಡಿದರು.

Scroll to Top