Bengaluru, Feb. 13: Sarojini Naidu’s Jayanti and Mahashivratri festival were celebrated herein Rashtrotthana Vidya Kendra – Banashankari. Sanskrit teachers performed puja to Bilvapriya Shiva. Music teachers and students of the choir sang bhajans. After the puja, the students explained the importance of Shivaratri celebrations.Students also performed dance service through dance. Students spoke about the life and achievements of Sarojini Naidu, who was famous for her name “Bharatada Kogile”. Students were made aware of the Satsang program conducted by Kutumba Prabodhan on the occasion of Shivaratri. The children were made aware of the intention of performing bhajans on Shivaratri day in our homes, if possible, by including neighbors, and performing pujas, and in the context of the Sangh centenary, the idea was conveyed to more people through this.

ಬೆಂಗಳೂರು, ಫೆ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಸರೋಜಿನಿ ನಾಯ್ಡುರವರ ಜಯಂತಿಯನ್ನು ಮತ್ತು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು. ಸಂಸ್ಕೃತ ಶಿಕ್ಷಕರು ಬಿಲ್ವಪ್ರಿಯ ಶಿವನಿಗೆ ಪೂಜೆಯನ್ನು ನೆರವೇರಿಸಿದರು. ಸಂಗೀತ ಶಿಕ್ಷಕರು ಹಾಗೂ ಗಾಯನ ವೃಂದದ ವಿದ್ಯಾರ್ಥಿಗಳು ಭಜನೆಯನ್ನು ಹಾಡಿದರು. ಪೂಜೆಯ ನಂತರ ವಿದ್ಯಾರ್ಥಿಗಳು ಶಿವರಾತ್ರಿ ಆಚರಣೆಯ ಮಹತ್ವವನ್ನು ತಿಳಿಸಿದರು. ನೃತ್ಯದ ಮೂಲಕ ನೃತ್ಯ ಸೇವೆಯನ್ನೂ ವಿದ್ಯಾರ್ಥಿಗಳು ಸಲ್ಲಿಸಿದರು. ವಿದ್ಯಾರ್ಥಿಗಳು “ಭಾರತದ ಕೋಗಿಲೆ” ಎನ್ನುವ ಹೆಸರಿನಿಂದಲೇ ಪ್ರಸಿದ್ಧಿಯಾಗಿದ್ದ ಸರೋಜಿನಿ ನಾಯ್ಡು ಅವರ ಜೀವನ ಮತ್ತು ಸಾಧನೆಯ ಕುರಿತು ಮಾತನಾಡಿದರು. ಶಿವರಾತ್ರಿಯ ಪ್ರಯುಕ್ತ ಕುಟುಂಬ ಪ್ರಬೋಧನ್ ನವರು ನಡೆಸುತ್ತಿರುವ ಸತ್ಸಂಗ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ನಮ್ಮ ನಮ್ಮ ಮನೆಗಳಲ್ಲಿ, ಸಾಧ್ಯವಾದರೆ ಅಕ್ಕಪಕ್ಕದ ಮನೆಯವರನ್ನು ಸೇರಿಸಿಕೊಂಡಂತೆ ಶಿವರಾತ್ರಿಯ ದಿನ ಭಜನೆಯನ್ನು ಮಾಡಿ, ಪೂಜೆಯನ್ನು ನೆರವೇರಿಸುವುದು ಜೊತೆಗೆ ಸಂಘ ಶತಾಬ್ಧಿಯ ಹಿನ್ನೆಲೆಯಲ್ಲಿ ಉತ್ತಮ ವಿಚಾರವನ್ನು ಹೆಚ್ಚಿನ ಜನರಿಗೆ ಈ ಮೂಲಕ ತಲುಪಿಸಬೇಕು ಎಂಬ ಉದ್ದೇಶವನ್ನು ಮಕ್ಕಳಿಗೆ ಮನದಟ್ಟು ಮಾಡಲಾಯಿತು.