Bengaluru, Jan. 22: Orange Day was organised for Gokulam students herein Rashtrotthana Vidya Kendra – Banashankari. All the children attended school wearing orange girls. All the teachers decorated the activity room with orange for the children. Pre-KG children came dressed in costumes of Swami Vivekananda, Valmiki, Hanuman and Siddaganga Sri Shivakumara Swamy. UKG children talked about them. LKG children conducted a quiz program.
Pre-KG children danced very well to the orange song. Teachers gave more information about Orange Day to the children through a PPT presentation.
An orange thumbprint activity was organized for the children, and children of all classes were happy by pointing their index fingers at the orange. All the children were given gifts for Orange Day.
ಬೆಂಗಳೂರು, ಜ. 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗೋಕುಲಂ ವಿದ್ಯಾರ್ಥಿಗಳಿಗಾಗಿ ಕಿತ್ತಳೆ ಬಣ್ಣದ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಮಕ್ಕಳೆಲ್ಲರೂ ಕಿತ್ತಳೆ ಬಣ್ಣದ ಹುಡುಗಿಯನ್ನು ತೊಟ್ಟು ಶಾಲೆಗೆ ಹಾಜರಾದರು. ಮಕ್ಕಳಿಗಾಗಿ ಎಲ್ಲ ಶಿಕ್ಷಕಿಯರು ಚಟುವಟಿಕಾ ಕೊಠಡಿಯನ್ನು ಕಿತ್ತಳೆ ಬಣ್ಣ ದಿಂದ ಅಲಂಕರಿಸಿದ್ದರು. ಪ್ರಿ-ಕೆಜಿ ಮಕ್ಕಳು ಸ್ವಾಮಿ ವಿವೇಕಾನಂದ, ವಾಲ್ಮೀಕಿ, ಹನುಮಾನ್ ಹಾಗೂ ಸಿದ್ದಗಂಗಾ ಶ್ರೀಗಳಾದ ಶಿವಕುಮಾರ ಸ್ವಾಮಿಯವರ ರೀತಿ ಪೋಷಾಕುಗಳನ್ನು ಧರಿಸಿ ಬಂದಿದ್ದರು. ಯುಕೆಜಿ ಮಕ್ಕಳು ಅವರುಗಳ ಬಗ್ಗೆ ಹೆಚ್ಚಿನ ವಿಷಯವನ್ನು ತಿಳಿಸಿಕೊಟ್ಟರು. ಎಲ್ ಕೆಜಿ ಮಕ್ಕಳು ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪ್ರಿ-ಕೆಜಿ ಮಕ್ಕಳು ಕಿತ್ತಳೆ ಬಣ್ಣದ ಹಾಡಿಗೆ ನೃತ್ಯವನ್ನು ಬಹಳ ಚೆನ್ನಾಗಿ ಮಾಡಿದರು. ಪಿಪಿಟಿಯ ಪ್ರದರ್ಶನದ ಮೂಲಕ ಮಕ್ಕಳಿಗೆ ಕಿತ್ತಳೆ ಬಣ್ಣದ ದಿನಾಚರಣೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶಿಕ್ಷಕಿಯರು ನೀಡಿದರು. ಮಕ್ಕಳಿಗಾಗಿ ಕಿತ್ತಳೆ ಹಣ್ಣಿನ ಹೆಬ್ಬೆರಳಿನ ಗುರುತು ಚಟುವಟಿಕೆ ಏರ್ಪಡಿಸಿದ್ದು, ಎಲ್ಲಾ ತರಗತಿಯ ಮಕ್ಕಳು ಕಿತ್ತಳೆ ಹಣ್ಣಿಗೆ ತೋರು ಬೆರಳನ್ನು ಮೂಡಿಸಿ ಸಂತೋಷ ಪಟ್ಟರು. ಮಕ್ಕಳೆಲ್ಲರಿಗೂ ಕಿತ್ತಳೆ ಬಣ್ಣದ ದಿನಾಚರಣೆಯ ಸಲುವಾಗಿ ಉಡುಗೊರೆಯನ್ನು ಕೊಡಲಾಯಿತು.






