Bengaluru, Mar. 4: Holi festival was celebrated at Rashtrotthana Vidya Kendra – Banashankari. Students dressed in colourful clothes explained the background and importance of the festival. Holi festival is celebrated on the full moon day of the Phalguna month, and Holika Dahana is its speciality. Students performed a beautiful dance on Holi. A Holi game was organized for Gokulam children in the school grounds. Young children celebrated by playing with colours and dancing. Holika Dahana was performed in the evening. Later, students participated in Holi dance and pot breaking program. A group dance was performed.

ಬೆಂಗಳೂರು, ಮಾ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ರಂಗುರಂಗಿನ ಉಡುಪು ತೊಟ್ಟು ಹಬ್ಬದ ಹಿನ್ನೆಲೆ ಮತ್ತು ಮಹತ್ವವನ್ನು ವಿವರಿಸಿದರು. ಹೋಳಿ ಹಬ್ಬವು ಫಾಲ್ಗುಣ ಮಾಸದ ಪೂರ್ಣಿಮೆಯಂದು ಆಚರಿಸುವ ವಸಂತದ ಆಗಮನದ ಸಂಕೇತವಾಗಿದ್ದು, ಹೋಲಿಕಾ ದಹನ ಇದರ ವಿಶೇಷವೆಂದು ತಿಳಿಸಲಾಯಿತು. ವಿದ್ಯಾರ್ಥಿಗಳು ಹೋಳಿ ಕುರಿತ ಸುಂದರ ನೃತ್ಯವನ್ನು ಪ್ರದರ್ಶಿಸಿದರು. ಗೋಕುಲಂ ಮಕ್ಕಳಿಗಾಗಿ ಶಾಲಾ ಮೈದಾನದಲ್ಲಿ ಹೋಳಿ ಆಟವನ್ನು ಏರ್ಪಡಿಸಲಾಗಿತ್ತು. ಪುಟಾಣಿ ಮಕ್ಕಳು ಬಣ್ಣಗಳೊಂದಿಗೆ ಆಟವಾಡುತ್ತಾ ನೃತ್ಯ ಮಾಡುತ್ತಾ ಸಂಭ್ರಮಿಸಿದರು. ಸಂಜೆ ಹೋಲಿಕಾ ದಹನವನ್ನು ನಡೆಸಲಾಯಿತು. ನಂತರ ವಿದ್ಯಾರ್ಥಿಗಳು ಹೋಳಿ ನೃತ್ಯ ಮತ್ತು ಮಡಿಕೆ ಒಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಮೂಹ ನೃತ್ಯವನ್ನು ಪ್ರದರ್ಶಿಸಲಾಯಿತು.