Bengaluru, Mar. 18: Yugadi festival and Dr Keshav Baliram Hedgewar’s birth anniversary were celebrated herein Rashtrotthana Vidya Kendra – Banashankari. Students explained in detail the life of Dr. Ji, his participation in the freedom struggle and the establishment of the Swayamsevak Sangh, and the way he dedicated himself to the work of the organisation. Students celebrated the Yugadi festival and celebrated Yugadi, the new year of Hindus. On this day, we should accept neem and jaggery equally and develop the self-confidence to face difficulties and joys. The entire nature is celebrating with new vitality for Yugadi. May that celebration find a home in everyone’s home and mind. The students talked about the celebration and the importance of the Yugadi festival. Students performed a beautiful dance.
ಬೆಂಗಳೂರು, ಮಾ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಯುಗಾದಿ ಹಬ್ಬವನ್ನು ಮತ್ತು ಡಾ. ಕೇಶವ ಬಲಿರಾಮ್ ಹೆಡಗೆವಾರ್ ಅವರ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಡಾಕ್ಟರ್ ಜಿ ಅವರ ಜೀವನ, ಸ್ವತಂತ್ರ ಹೋರಾಟದಲ್ಲಿ ಅವರ ಪಾಲ್ಗೊಳ್ಳುವಿಕೆ ಮತ್ತು ಸ್ವಯಂಸೇವಕ ಸಂಘದ ಸ್ಥಾಪನೆ, ಸಂಘಟನೆಯ ಕಾರ್ಯದಲ್ಲಿ ಅವರು ತಮ್ಮನ್ನು ತಾವು ಅರ್ಪಿಸಿಕೊಂಡ ಬಗೆಯನ್ನು ಸವಿಸ್ತಾರವಾಗಿ ವಿವರಿಸಿದರು. ಯುಗಾದಿ ಹಬ್ಬವನ್ನು ಆಚರಿಸಿ ವಿದ್ಯಾರ್ಥಿಗಳು ಹಿಂದೂಗಳ ಹೊಸ ವರ್ಷ ಯುಗಾದಿ. ಈ ದಿನ ಬೇವು ಬೆಲ್ಲವನ್ನು ಸಮಾನವಾಗಿ ಸ್ವೀಕರಿಸಿ, ಕಷ್ಟ ಸುಖಗಳನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಮೂಡಿಸಿಕೊಳ್ಳಬೇಕು. ಯುಗಾದಿಗಾಗಿ ಇಡೀ ಪ್ರಕೃತಿಯೇ ನವ ಚೈತನ್ಯದಿಂದ ಸಂಭ್ರಮಿಸುತ್ತಿದೆ. ಆ ಸಂಭ್ರಮ ಪ್ರತಿಯೊಬ್ಬರ ಮನೆ ಮನದಲ್ಲೂ ಮನೆ ಮಾಡುವಂತಾಗಲಿ ಎಂದು ವಿದ್ಯಾರ್ಥಿಗಳು ಯುಗಾದಿ ಹಬ್ಬದ ಆಚರಣೆ ಮತ್ತು ಮಹತ್ವದ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳು ಸುಂದರವಾದ ನೃತ್ಯವನ್ನು ಪ್ರದರ್ಶಿಸಿದರು.









