Bengaluru, Jan. 10: A special program called “Saptashakti Sangam” was organized herein Rashtrotthana Vidya Kendra – Banashankari under the guidance of Vidya Bharatiya under the guidance of the school principal, Smt. Nanda. This was a meaningful program organized by women for women.The program was presided over by RVK, and Smt. Godamani, the educational supervisor of the South Zone, spoke and emphasized the importance of mothers. The program was attended by resource persons, Smt. Vandana Shastri and Smt. Sitara, who shared their valuable ideas. In this program, which was held in two sessions, the resource persons spoke inspiringly on the power, potential, skills inherent in women and their role in building society, and the environment according to Indian philosophy. Smt. Vandana Shastri, a bold woman working for the society and one of the parents of the school, was honoured in this program. At the end of the program, the ceremony concluded with the pledge, “I will be a good woman, a good citizen, and responsibly protect my family and the environment.”
ಬೆಂಗಳೂರು, ಜ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವಿದ್ಯಾ ಭಾರತಿಯ ಆಯೋಜನೆಯಂತೆ, ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ನಂದ ಅವರ ಮಾರ್ಗದರ್ಶನದಲ್ಲಿ “ಸಪ್ತಶಕ್ತಿ ಸಂಗಮ” ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದು ಮಹಿಳೆಯರಿಂದ ಮಹಿಳೆಯರಿಗಾಗಿ ನಡೆಯುವ ಸಾರ್ಥಕ ಕಾರ್ಯಕ್ರಮವಾಗಿತ್ತು.ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿಕೊಂಡಿದ್ದ ಆರ್ ವಿ ಕೆ, ದಕ್ಷಿಣ ವಲಯದ ಶೈಕ್ಷಣಿಕ ಮೇಲ್ವಿಚಾರಕರಾದ ಶ್ರೀಮತಿ ಗೋದಾಮಣಿ ಅವರು ಮಾತನಾಡುತ್ತಾ ತಾಯಿಯ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ವಂದನಾ ಶಾಸ್ತ್ರಿ ಹಾಗೂ ಶ್ರೀಮತಿ ಸಿತಾರ ಅವರುಗಳು ಆಗಮಿಸಿ ತಮ್ಮ ಅಮೂಲ್ಯವಾದ ವಿಚಾರಗಳನ್ನು ಹಂಚಿಕೊಂಡರು. ಎರಡು ಅವಧಿಗಳಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸಂಪನ್ಮೂಲ ವ್ಯಕ್ತಿಗಳು ಮಹಿಳೆಯರಲ್ಲಿ ಅಡಕವಾಗಿರುವ ಶಕ್ತಿ, ಸಾಮರ್ಥ್ಯ, ಕೌಶಲ್ಯ ಹಾಗೂ ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ, ಭಾರತೀಯ ತತ್ವಶಾಸ್ತ್ರದ ಪ್ರಕಾರ ಪರಿಸರ ಎಂಬ ವಿಷಯಗಳ ಬಗ್ಗೆ ಪ್ರೇರಣಾದಾಯಕವಾಗಿ ಮಾತನಾಡಿದರು.ಸಮಾಜಮುಖಿ ಕೆಲಸ ಮಾಡುತ್ತಿರುವ ದಿಟ್ಟ ಮಹಿಳೆಯೂ, ಶಾಲೆಯ ಪೋಷಕರಲ್ಲಿ ಒಬ್ಬರೂ ಆದ ಶ್ರೀಮತಿ ವಂದನಾ ಶಾಸ್ತ್ರೀಯವರಿಗೆ ಈ ಕಾರ್ಯಕ್ರಮದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ, “ನಾನೊಬ್ಬ ಉತ್ತಮ ಮಹಿಳೆಯಾಗಿ, ಉತ್ತಮ ಪ್ರಜೆಯಾಗಿ, ನನ್ನ ಕುಟುಂಬ ಹಾಗೂ ಪರಿಸರವನ್ನು ಜವಾಬ್ದಾರಿಯುತವಾಗಿ ಕಾಪಾಡುವೆ” ಎಂಬ ಸಂಕಲ್ಪವನ್ನು ಕೈಗೊಂಡು, ಸಮಾರಂಭವು ಸಂಪನ್ನಗೊಂಡಿತು.




