Bengaluru, Septt. 13: On the occasion of the 60th anniversary of Rashtrotthana Parishat, Rashtrotthana Vidya Kendra – Banashankari, which follows the principle of “Selfless Service is real Education” a special program called “Snehamaya Sahabhojana” was organized to honour the drivers, teachers and cleaning staff of the school. As part of this, teachers brought various delicious dishes prepared by themselves from their homes, served them to the assistant staff and had a meal with them. At the beginning of the program, an attempt was made to engage the support staff in various recreational games to cheer them up for a while from their daily busy lives. Everyone enjoyed the game with enthusiasm. Later, he got the opportunity to share the joys and sorrows of life among the decent dishes. After the meal, some of them sang songs, displaying their art and skill; Still others shared their experiences.
On this occasion, the teachers expressed their heartfelt gratitude by gifting sarees to each of the support staff. The faces of those who received the gift were filled with joy and satisfaction. More than 400 staff members participated in this beautiful event.
ಬೆಂಗಳೂರು, ಸೆ. 13: “ನಿಸ್ವಾರ್ಥ ಸೇವೆಯೇ ನಿಜವಾದ ಶಿಕ್ಷಣ” ಎಂಬ ತತ್ತ್ವವನ್ನು ಅನುಸರಿಸುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ತನ್ನ 60ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಪಂಚ ಪರಿವರ್ತನೆಯ ಅಂಶಗಳಲ್ಲಿ ಒಂದಾದ ಸಾಮರಸ್ಯವನ್ನು ಬೆಳೆಸುವ ಉದ್ದೇಶದಿಂದ, ಶಾಲೆಯ ವಾಹನ ಚಾಲಕರು, ಆಯಾಗಳು ಹಾಗೂ ಸ್ವಚ್ಛತಾ ಸಿಬ್ಬಂದಿಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ “ಸ್ನೇಹಮಯ ಸಹಭೋಜನ” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಇದರ ಅಂಗವಾಗಿ, ಶಿಕ್ಷಕರು ತಮ್ಮ ಮನೆಗಳಿಂದ ಸ್ವತಃ ತಯಾರಿಸಿದ ವಿವಿಧ ರುಚಿಕರ ಭಕ್ಷ್ಯಗಳನ್ನು ತಂದಿದ್ದು, ಅವನ್ನು ಸಹಾಯಕ ಸಿಬ್ಬಂದಿಗೆ ಬಡಿಸಿ, ಅವರ ಜೊತೆಯಲ್ಲೇ ಸಹಭೋಜನ ಮಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಸಹಾಯಕ ಸಿಬ್ಬಂದಿಯನ್ನು ವಿವಿಧ ಮನರಂಜನಾತ್ಮಕ ಆಟಗಳಲ್ಲಿ ತೊಡಗಿಸಿ, ಅವರ ದಿನನಿತ್ಯದ ಶ್ರಮದ ಜೀವನದಿಂದ ಸ್ವಲ್ಪ ಸಮಯವನ್ನು ಉಲ್ಲಾಸಭರಿತವಾಗಿಸಲು ಪ್ರಯತ್ನಿಸಲಾಯಿತು. ಎಲ್ಲರೂ ಉತ್ಸಾಹದಿಂದ ಆಟವಾಡಿ ಆನಂದಿಸಿದರು. ನಂತರ ಸವಿಯಲಾದ ಭಕ್ಷ್ಯಗಳ ನಡುವೆ ಜೀವನದ ಕಷ್ಟ–ಸುಖಗಳನ್ನು ಹಂಚಿಕೊಳ್ಳುವ ಸುಸಂದರ್ಭವೂ ದೊರೆಯಿತು. ಊಟದ ನಂತರ ಕೆಲವರು ತಮ್ಮ ಕಲೆ ಮತ್ತು ಕೌಶಲ್ಯವನ್ನು ಪ್ರದರ್ಶಿಸಿ ಹಾಡುಗಳನ್ನು ಹಾಡಿದರು; ಇನ್ನೂ ಕೆಲವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ನೆನಪಿನ ಸಂಧರ್ಭವಾಗಿ ಶಿಕ್ಷಕರು ಪ್ರತಿಯೊಬ್ಬ ಸಹಾಯಕ ಸಿಬ್ಬಂದಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿ ತಮ್ಮ ಹೃದಯದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಉಡುಗೊರೆಯನ್ನು ಸ್ವೀಕರಿಸಿದವರ ಮುಖಗಳಲ್ಲಿ ಸಂತೋಷ ಮತ್ತು ತೃಪ್ತಿ ತೇಲಿಬಂತು. ಈ ಸುಂದರ ಕಾರ್ಯಕ್ರಮದಲ್ಲಿ ಸುಮಾರು 400ಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.




















