Bengaluru, Sept. 20: As part of the 60th anniversary celebrations of Rashtrotthana Parishat, a total of 56 teachers and vehicle drivers participated in the service held at Sri Mahalakshmi Temple near Rashtrotthana Vidya Kendra – Banashankari. We gave our small contribution to the cleanliness and greenery of the environment by removing the weeds around the temple, cleaning the premises and planting new trees. Parents also joined in the cleanliness campaign by giving various types of plants.
ಬೆಂಗಳೂರು, ಸೆ. 20: ರಾಷ್ಟ್ರೋತ್ಥಾನ ಪರಿಷತ್ತಿನ 60ನೇ ವರ್ಷದ ಸಂಭ್ರಮದ ಅಂಗವಾಗಿ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಬನಶಂಕರಿಯ ಪಕ್ಕದಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಸೇವಾ ಕಾರ್ಯದಲ್ಲಿ ಒಟ್ಟು 56 ಮಂದಿ ಶಿಕ್ಷಕರು ಮತ್ತು ವಾಹನ ಚಾಲಕರು ಸಕ್ರಿಯವಾಗಿ ಭಾಗವಹಿಸಿದರು. ದೇವಸ್ಥಾನದ ಸುತ್ತಮುತ್ತಲಿನ ಕಳೆಗಿಡಗಳನ್ನು ತೆಗೆದು ಆವರಣವನ್ನು ಸ್ವಚ್ಛಗೊಳಿಸಿ, ಹೊಸ ಗಿಡಗಳನ್ನು ನೆಡುವ ಮೂಲಕ ಪರಿಸರದ ಸ್ವಚ್ಛತೆ ಮತ್ತು ಹಸಿರುಮಯತೆಯತ್ತ ನಮ್ಮ ಕಿರು ಕೊಡುಗೆಯನ್ನು ನೀಡಲಾಯಿತು. ವಿವಿಧ ರೀತಿಯ ಗಿಡಗಳನ್ನು ನೀಡುವ ಮೂಲಕ ಪೋಷಕರೂ ಸಹ ಈ ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿದರು.






