Bengaluru, Sept. 5: Teachers Day program was organized herein Rashtrotthana Vidya Kendra – Banashankari. The students of class 10th conducted the program very beautifully. Considering the contribution made by Dr. Sarvepalli Radhakrishnan to the field of education, his birthday is celebrated as Teachers Day and the students talked about the importance of celebrating Teachers Day. Then the students entertained the teachers with music, dance, and dramas. Then the students of class 10th played the role of teachers and taught the younger children in their place that day. Then the program specially organized for the teachers of Banashankari and Somanahalli schools was attended by the chief guest, Sri. Dr. Karunakar Rai, a professor and social worker at Nitte Meenakshi College. Every teacher and student have their own unique personality and specialty. Stating that no technology can take away the place of a teacher in the coming days, he spoke about the importance of teachers by mentioning a couple of incidents that happened in his life. School Correspondent Sri Vasanth Kumar was present and appreciated the contribution and sacrifice of teachers in building a healthy and sustainable society. Many teachers displayed their hidden talents through cultural programs like song, dance, drama etc. Smt. Nanda administered the oath to the teachers. The chief guest honoured all the teachers by presenting them with books. Teachers who had worked in the institution for 10 years and rendered their valuable service were specially honoured. Some selected teachers shared their professional life experiences.
ಬೆಂಗಳೂರು, ಸೆ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 10ನೇ ತರಗತಿಯ ವಿದ್ಯಾರ್ಥಿಗಳು ಬಹಳ ಸುಂದರವಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಇವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದು ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಮಹತ್ವವನ್ನು ತಿಳಿಸಿದರು. ನಂತರ ವಿದ್ಯಾರ್ಥಿಗಳು ಸಂಗೀತ, ನೃತ್ಯ, ನಾಟಕಗಳ ಮೂಲಕ ಶಿಕ್ಷಕರನ್ನು ರಂಜಿಸಿದರು. ನಂತರ ಹತ್ತನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರ ಪಾತ್ರವನ್ನು ನಿರ್ವಹಿಸಿ ಅವರ ಸ್ಥಾನದಲ್ಲಿ ಕಿರಿಯ ಮಕ್ಕಳಿಗೆ ಆ ದಿನ ಪಾಠವನ್ನು ಮಾಡಿದರು. ನಂತರ ಬನಶಂಕರಿ ಮತ್ತು ಸೋಮನಹಳ್ಳಿ ಶಾಲೆಯ ಶಿಕ್ಷಕರಿಗಾಗಿ ವಿಶೇಷವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಪ್ರೊಫೆಸರ್ ಮತ್ತು ಸಮಾಜ ಸೇವಕರು ಆಗಿರುವ ಶ್ರೀಯುತ ಡಾ. ಕರುಣಾಕರ ರೈ ರವರು ಆಗಮಿಸಿದ್ದರು. ಪ್ರತಿಯೊಬ್ಬ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಮ್ಮದೇ ಆಗಿರುವ ಭಿನ್ನ ವ್ಯಕ್ತಿತ್ವವನ್ನು, ವಿಶೇಷತೆಯನ್ನು ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ಯಾವುದೇ ತಂತ್ರಜ್ಞಾನ ಶಿಕ್ಷಕರ ಸ್ಥಾನವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ತಿಳಿಸುತ್ತಾ, ತಮ್ಮ ಜೀವನದಲ್ಲಿ ನಡೆದ ಒಂದೆರಡು ಘಟನೆಗಳನ್ನು ಉಲ್ಲೇಖಿಸಿ ಶಿಕ್ಷಕರ ಮಹತ್ವವನ್ನು ತಿಳಿಸಿದರು. ಶಾಲೆಯ ಕರೆಸ್ಪಾಂಡೆಂಟ್ ಶ್ರೀ ವಸಂತ ಕುಮಾರ ಅವರು ಉಪಸ್ಥಿತರಿದ್ದು ಸ್ವಸ್ಥ-ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆಯನ್ನು, ತ್ಯಾಗವನ್ನು ಶ್ಲಾಘಿಸಿದರು. ಹಾಡು, ನೃತ್ಯ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅನೇಕ ಶಿಕ್ಷಕರು ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಪ್ರದರ್ಶಿಸಿದರು.mಶ್ರೀಮತಿ ನಂದ ಅವರು ಶಿಕ್ಷಕರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಹಾಗೆ ಮುಖ್ಯ ಅತಿಥಿಗಳು ಪುಸ್ತಕವನ್ನು ನೀಡುವ ಮೂಲಕ ಎಲ್ಲಾ ಶಿಕ್ಷಕರನ್ನು ಗೌರವಿಸಿದರು. ಸಂಸ್ಥೆಯಲ್ಲಿ 10 ವರ್ಷಗಳ ಕಾಲ ದುಡಿದು, ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದ ಶಿಕ್ಷಕರನ್ನು ವಿಶೇಷವಾಗಿ ಗೌರವಿಸಲಾಯಿತು. ಆಯ್ದ ಕೆಲವು ಶಿಕ್ಷಕರು ತಮ್ಮ ವೃತ್ತಿ ಜೀವನದ ಅನುಭವವನ್ನು ಹಂಚಿಕೊಂಡರು.




















