Bengaluru, Jan. 5-8: Veshabhushana Spardhe and Veshabhushana Dinacharane celebration were held herein Rashtrotthana Vidya Kendra – Banashankari for four days.
5-1-2026 – UKG:
Children dressed up as great personalities and recited their slogans.
6-1-2026 – LKG:
Parents made useful things out of waste materials and dressed the children in their costumes. The children explained to the audience what the costumes they wore were made of and how they can be used.
7-1-2026 – PreKG:
Children dressed up as community helpers and explained how they are helping our society and all of us.
8-1-2026 – Matruchaya:
Children came dressed in costumes based on the creativity of their parents. The children talked about the costumes they wore and made everyone feel comfortable about it.

ಬೆಂಗಳೂರು, ಜ. ೫-೮: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವೇಷ ಭೂಷಣ ಸ್ಪರ್ಧೆ ಹಾಗೂ ವೇಷಭೂಷಣ ದಿನಾಚರಣೆ ನಾಲ್ಕು ದಿನಗಳ ಕಾಲ ನಡೆಯಿತು.
5-1-2026 – ಯುಕೆಜಿ:
ಮಕ್ಕಳು ಮಹಾನ್ ವ್ಯಕ್ತಿಗಳ ಪೋಷಾಕು ಧರಿಸಿ ಅವರುಗಳ ಘೋಷವಾಕ್ಯಗಳನ್ನೆಲ್ಲ ಹೇಳಿದರು.
6-1-2026 – ಎಲ್ ಕೆ ಜಿ:
ತ್ಯಾಜ್ಯ ವಸ್ತುಗಳಿಂದ ಉಪಯುಕ್ತ ವಸ್ತುಗಳನ್ನು ಮಾಡಿ ಅದರ ಪೋಷಾಕುಗಳನ್ನು ಮಕ್ಕಳಿಗೆ ಪೋಷಕರು ಹಾಕಿದ್ದರು. ಮಕ್ಕಳು ತಾವು ಹಾಕಿಕೊಂಡ ಪೋಷಕುಗಳು ಯಾವುದರಿಂದ ಮಾಡಲ್ಪಟ್ಟಿವೆ ಹಾಗೂ ಅದನ್ನು ಯಾವ ರೀತಿ ಉಪಯೋಗಿಸಬಹುದು ಎಂಬುದನ್ನು ವೀಕ್ಷಕರ ಮುಂದೆ ವಿವರಿಸಿದರು.
7-1-2026 – ಪ್ರೀಕೆಜಿ:
ಮಕ್ಕಳು ಸಮುದಾಯ ಸಹಾಯಕರುಗಳ ಪೋಷಕುಗಳನ್ನು ಧರಿಸಿ ಅವರು ನಮ್ಮ ಸಮಾಜಕ್ಕೆ ಹಾಗೂ ನಮಗೆಲ್ಲಾ ಯಾವ ರೀತಿಯಿಂದ ಸಹಾಯ ಮಾಡುತ್ತಿದ್ದಾರೆ ಎಂದು ಅವರ ಬಗ್ಗೆ ವಿವರಣೆ ನೀಡಿದರು.
8-1-2026 – ಮಾತೃಛಾಯಾ:
ಮಕ್ಕಳು ಪೋಷಕರ ಸೃಜನಶೀಲತೆಯ ಆಧಾರದ ಮೇಲೆ ಪೋಷಾಕುಗಳನ್ನು ಧರಿಸಿ ಬಂದಿದ್ದರು. ತಾವು ಧರಿಸಿದ್ದ ಪೋಷಾಕುಗಳ ಬಗ್ಗೆ ಮಕ್ಕಳು ಮಾತನಾಡಿ ಆ ವಿಷಯವನ್ನು ಎಲ್ಲರಿಗೂ ಮನಮುಟ್ಟುವಂತೆ ತಿಳಿಸಿದರು.