12 08 23 workshop for non teaching staff of rvk schools @ rvk banashankari

ಬೆಂಗಳೂರು, ಆಗಸ್ಟ್ 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳ ಬೋಧಕೇತರ ಸಿಬ್ಬಂದಿ ವರ್ಗದವರಿಗೆ 1 ದಿನದ ಪ್ರಶಿಕ್ಷಣ ಕಾರ್ಯಾಗಾರವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಆಯೋಜಿಸಲಾಗಿತ್ತು.

Bengaluru, Aug 12: For the Non-teaching Staff of Rashtrotthana Vidya Kendras 1-day Training Workshop was organised herein Rashtrotthana Vidya Kendra – Banashankari.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಪ್ರಾಚಾರ್ಯರಾದ ಶ್ರೀ ವಸಂತಕುಮಾರ್ ಬಿ ಎಸ್ ಪ್ರಾಸ್ತಾವಿಕ ಭಾಷಣ ಮಾಡಿದರು.

ರಾಷ್ಟ್ರೋತ್ಥಾನ ಮಾಧ್ಯಮ ಕೇಂದ್ರದ ನಿರ್ವಾಹಕರಾದ ಶ್ರೀ ಭಾರತೀಶ ಪಿ ಅವರು ರಾಷ್ಟ್ರೋತ್ಥಾನ ಪರಿಷತ್ತಿನ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು.

ಶ್ರೀ ಗುರುಪ್ರಸಾದ್, ಕುಟುಂಬ ಪ್ರಬೋಧನ್, ಬೆಂಗಳೂರು ದಕ್ಷಿಣ ವಿಭಾಗ, ಇವರು ಸಾಮಾಜಿಕ ವ್ಯವಸ್ಥೆಯಲ್ಲಿ ಕುಟುಂಬದ ಪಾತ್ರದ ಬಗೆಗೆ ತಿಳಿಸಿಕೊಟ್ಟರು.

ಡಾ. ಟಿ ಎನ್ ಲೋಕೇಶ್, ಶಿಕ್ಷಣ ವಿಭಾಗದ ಮುಖ್ಯಸ್ಥರು ಹಾಗೂ ಸಂಯೋಜಕರು, ಎನ್.ಎಂ.ಕೆ.ಆರ್.ವಿ. ಮಹಿಳಾ ಕಾಲೇಜು, ಜಯನಗರ, ಬೆಂಗಳೂರು, ಇವರು ಪ್ರಚಲಿತ ವಿದ್ಯಮಾನಗಳ ಬಗೆಗೆ ತಿಳಿಸಿದರು.

ಶ್ರೀ ವೆಂಕೋಬರಾವ್, ಅಡ್ಮಿನ್ ವಿಭಾಗ ಪ್ರಮುಖರು ಕೆಲಸವನ್ನು ಯಾವ ರೀತಿ ಮಾಡಬೇಕು, ಶಾಲೆಯಲ್ಲಿ ಸ್ವಚ್ಛತೆಯನ್ನು ಹೇಗೆ ಕಾಪಾಡಬೇಕು ಎಂದು ತಿಳಿಸಿಕೊಟ್ಟರು.

Scroll to Top