79th Independence Day Celebration in RVK – Banashanakari

Bengaluru, Aug. 15: India’s 79th Independence Day was celebrated with great enthusiasm herein Rashtrotthana Vidya Kendra – Banashankari. Former Army officer and IAF Captain Karkad Purushottam Bhat was the chief guest for the program. Ghosh team welcomed the Chief Guests. After viewing the parade, the chief guests saluted the national flag, hoisted the flag and sang the national anthem. Then a procession was taken out under the leadership of school student leaders and channel leaders. In his speech, the Chief Guest said that children should adopt courage, discipline, and skills. They should develop patriotism and thus build the nation. They should remember the history of India. The students who scored the highest marks in the previous year’s 10th class annual examination were honoured with the Pratibha Puraskar. Similarly, students who scored 100% marks in various subjects were honoured on this occasion. Teacher Shrimati Gurushri was honoured with the Auditing Award. Similarly, the birth anniversary of two great personalities was also celebrated today. The children introduced the way Sangolli Rayanna, who held a unique place in the freedom struggle, fought against the British, and the way Rayanna’s patriotism and sacrificed his life for the country. Similarly, the birthday of Maharishi Aurobindo was celebrated today and the achievements he has made in the fields of yoga, poetry, drama, biography etc. were introduced to the children. Selected children from various classes performed cultural programs like songs, dance, drama, yoga demonstration etc.

ಬೆಂಗಳೂರು, ಆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಭಾರತದ 79ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸೈನ್ಯದ ಮಾಜಿ ಯೋಧರಾದ ಮತ್ತು IAF ನಲ್ಲಿ ವಾಯುದಳದ ಕ್ಯಾಪ್ಟನ್ ಕಾರ್ಕಡ ಪುರುಷೋತ್ತಮ ಭಟ್ ಆಗಮಿಸಿದ್ದರು. ಘೋಷ್ ತಂಡದವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳು ಪೆರೇಡ್ ವೀಕ್ಷಣೆಯನ್ನು ಮಾಡಿದ ನಂತರ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿ ಧ್ವಜಾರೋಹಣವನ್ನು ಮಾಡಿ, ರಾಷ್ಟ್ರಗೀತೆಯನ್ನು ಹಾಡಿದರು. ನಂತರ ಶಾಲಾ ವಿದ್ಯಾರ್ಥಿ ನಾಯಕರು ಹಾಗೂ ವಾಹಿನಿ ಪ್ರಮುಖರ ನೇತೃತ್ವದಲ್ಲಿ ಪಥಸಂಚಲನವನ್ನು ನಡೆಸಲಾಯಿತು. ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ಮಕ್ಕಳು ಧೈರ್ಯ, ಶಿಸ್ತು, ಹಾಗೂ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು ಆ ಮೂಲಕ ರಾಷ್ಟ್ರ ನಿರ್ಮಾಣವನ್ನು ಮಾಡಬೇಕು ಎಂದು ತಿಳಿಸಿದರು. ಭಾರತದ ಇತಿಹಾಸವನ್ನು ನೆನಪಿಸಿಕೊಳ್ಳಬೇಕು ಎಂದರು. ಹಿಂದಿನ ವರ್ಷದ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಹಾಗೆಯೇ ಬೇರೆ ಬೇರೆ ವಿಷಯಗಳಲ್ಲಿ ನೂರಕ್ಕೆ ನೂರು ಅಂಕವನ್ನು ಗಳಿಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಶಿಕ್ಷಕಿ ಶ್ರೀಮತಿ ಗುರುಶ್ರೀ ಅವರಿಗೆ ಆಡಿಟಿಂಗ್ ಅವಾರ್ಡನ್ನು ನೀಡಿ ಗೌರವಿಸಲಾಯಿತು. ಹಾಗೆಯೇ ಇಂದು ಇಬ್ಬರು ಮಹಾನ್ ವ್ಯಕ್ತಿಗಳ ಜಯಂತಿಯನ್ನು ಕೂಡ ಆಚರಿಸಲಾಯಿತು. ಸ್ವಾತಂತ್ರ ಹೋರಾಟದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದಿರುವ ಸಂಗೊಳ್ಳಿ ರಾಯಣ್ಣನು ಬ್ರಿಟಿಷರ ವಿರುದ್ಧ ಹೋರಾಡಿದ ರೀತಿಯನ್ನು, ರಾಯಣ್ಣನ ದೇಶಭಕ್ತಿಯನ್ನು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಬಗೆಯನ್ನು ಮಕ್ಕಳು ಪರಿಚಯ ಮಾಡಿಕೊಟ್ಟರು. ಹಾಗೆ ಮಹರ್ಷಿ ಅರವಿಂದ ಅವರ ಜನ್ಮದಿನವನ್ನು ಇಂದು ಆಚರಿಸಲಾಯಿತು ಮತ್ತು ಅವರು ಯೋಗ ಮಾರ್ಗ, ಕಾವ್ಯ, ನಾಟಕ, ಜೀವನ ಚರಿತ್ರೆ ಮುಂತಾದ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ಮಕ್ಕಳಿಗೆ ಪರಿಚಯಿಸಲಾಯಿತು. ವಿವಿಧ ತರಗತಿಗಳ ಆಯ್ಕೆ ಮಕ್ಕಳು ಹಾಡು, ನೃತ್ಯ, ನಾಟಕ, ಯೋಗ ಪ್ರದರ್ಶನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Scroll to Top