Bengaluru, Oct. 9: Kartika Deepotsava was celebrated herein Rashtrotthana Vidya Kendra – Banashankari. The program started with traditional Go-pooja and Tulsi Puja. The Chief Guest Sri Umesh Kumar, Provincial Organizing Secretary of Vidya Bharati Karnataka, said that it is a very happy to see that everyone is celebrating by creating a family atmosphere in the school. He said that the role of parents in building the future of children is very important. The students and the Matra Tanda performed songs and dances in praise of Lord Shiva. The Guests, Pradhanacharya, Deputy Pradhanacharya, teachers, parents and students all lit the lamp on the pre-drawn Rangolis like Omkara, Shivlinga, Trishula, Damaru, Swastik images. During the lighting of the lamp, the school choir performed a bhajan of Lord Shiva.
ಬೆಂಗಳೂರು, ಅ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಪ್ರದಾಯಬದ್ಧವಾಗಿ ಗೋಪೂಜೆ ಹಾಗೂ ತುಳಸಿ ಪೂಜೆಯನ್ನು ಮಾಡುವುದರೊಂದಿಗೆ ಆರಂಭಿಸಲಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ವಿದ್ಯಾಭಾರತಿ ಕರ್ನಾಟಕದ ಪ್ರಾಂತ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಉಮೇಶ್ ಕುಮಾರ್ ಅವರು ಶಾಲೆಯಲ್ಲಿ ಕುಟುಂಬದ ವಾತಾವರಣ ಸೃಷ್ಟಿ ಮಾಡಿ ಎಲ್ಲರೂ ಸೇರಿ ಆಚರಿಸುತ್ತಿರುವುದು ಬಹಳ ಸಂತಸದ ವಿಚಾರ ಎಂದರು. ಪೋಷಕರಿಗೆ ಹಿತನುಡಿಗಳನ್ನು ತಿಳಿಸುತ್ತಾ ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಪೋಷಕರ ಪಾತ್ರ ಬಹಳ ಹಿರಿದು ಎಂದು ಹೇಳಿದರು.ವಿದ್ಯಾರ್ಥಿಗಳು ಹಾಗೂ ಮಾತೃ ತಂಡವು ಶಿವನನ್ನು ಕುರಿತು ಹಾಡಿ ಹೊಗಳುವ ಗೀತೆಗಳು ಹಾಗೂ ನೃತ್ಯವನ್ನು ಪ್ರದರ್ಶಿಸಿದರು. ಮೊದಲೇ ಬಿಡಿಸಲಾದ ರಂಗೋಲಿಗಳಾದ ಓಂಕಾರ, ಶಿವಲಿಂಗ, ತ್ರಿಶೂಲ, ಡಮರು, ಸ್ವಸ್ತಿಕ್ ಚಿತ್ರಗಳ ಮೇಲೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು, ಪ್ರಧಾನಾಚಾರ್ಯರು, ಉಪ ಪ್ರಧಾನಾಚಾರ್ಯರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಸೇರಿ ದೀಪದಿಂದ ದೀಪ ಹಚ್ಚಿದರು.ದೀಪ ಹಚ್ಚುವ ಸಮಯದಲ್ಲಿ ಶಾಲೆಯ ಗಾಯನವೃಂದದವರು ಶಿವನ ಭಜನೆಯನ್ನು ಮಾಡಿದರು.