Vegetables Day Celebration in RVK – Banashankari

Bengaluru, Nov. 26: Children of Gokulam celebrated Vegetable Day herein Rashtrotthana Vidya Kendra – Banashankari. Different vegetables brought by the children were displayed for the children in the activity room. The benefits of eating vegetables were explained to the children in detail by creating a food pyramid. The children had an open conversation about different vegetables; talked about dishes made from vegetables and sang nursery rhymes related to vegetables in English and Kannada. They played the game of feeding carrots to the rabbit with great joy.

ಬೆಂಗಳೂರು, ನ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಗೋಕುಲಂ ಮಕ್ಕಳು ತರಕಾರಿ ದಿನವನ್ನು ಆಚರಿಸಿದರು. ಮಕ್ಕಳು ತಂದ ಬೇರೆ ಬೇರೆ ತರಕಾರಿಗಳನ್ನು ಚಟುವಟಿಕೆ ಕೊಠಡಿಯಲ್ಲಿ ಮಕ್ಕಳಿಗಾಗಿ ಪ್ರದರ್ಶಿಸಲಾಯಿತು. ಆಹಾರ ಪಿರಮಿಡ್ ಅನ್ನು ರಚಿಸಿ ತರಕಾರಿಯನ್ನು ತಿನ್ನುವ ಪ್ರಯೋಜನವನ್ನು ಮಕ್ಕಳಿಗೆ ವಿಸ್ತಾರವಾಗಿ ತಿಳಿಸಲಾಯಿತು. ಮಕ್ಕಳು ವಿಧವಿಧವಾದ ತರಕಾರಿಗಳ ಬಗ್ಗೆ ಮುಕ್ತ ಸಂಭಾಷಣೆಯನ್ನು ಮಾಡಿದರು; ತರಕಾರಿಯಿಂದ ತಯಾರಿಸಿರುವ ಖಾದ್ಯಗಳ ಬಗ್ಗೆ ಮಾತನಾಡಿದರು ಮತ್ತು ತರಕಾರಿಗಳಿಗೆ ಸಂಬಂಧಿಸಿದ ಶಿಶುಗೀತೆಯನ್ನು ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಹಾಡಿದರು. ಮೊಲಕ್ಕೆ ಕ್ಯಾರೆಟ್ ತಿನ್ನಿಸುವ ಆಟವನ್ನು ಬಹಳ ಸಂತೋಷದಿಂದ ಆಡಿದರು.

Scroll to Top