Bengaluru, Dec. 5: Rashtrotsava program was organized under the theme of ‘Village Beauty’, which represented some events such as the daily life of the villagers in the lap of nature, language, dress, festival and fair celebrations, and the specialty of the food vendors.Smt. Tara Anuradha, a leading actress and producer of Kannada films graced the program. Addressing the program, Smt Tara Anuradha praised the present education system, the responsibility of parents, and the respect given to senior parents in the school. She appreciated the lighting of the lamp and the prayers in school. The lecturer, Sri. Rajesh Padmar, who is the provincial campaign leader of the RSS, gave the introductory speech.
ಬೆಂಗಳೂರು, ಡಿ.5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಪ್ರಕೃತಿಯ ಮಡಿಲಲ್ಲಿನ ಹಳ್ಳಿಗರ ಜನಜೀವನ, ಭಾಷೆ,ವೇಷ, ಹಬ್ಬ ಜಾತ್ರೆಯ ಸಂಭ್ರಮ, ಅನ್ನದಾತರ ವಿಶೇಷತೆ ಹೀಗೆ ಕೆಲವು ಘಟನೆಗಳನ್ನು ಪ್ರತಿನಿಧಿಸುವ ‘ಹಳ್ಳಿಯ ಸೊಬಗು’ ಎಂಬ ವಿಷಯದಡಿ ರಾಷ್ಟ್ರೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಕನ್ನಡ ಚಲನಚಿತ್ರದ ಅಗ್ರಗಣ್ಯ ನಟಿ, ಹಾಗೂ ನಿರ್ಮಾಪಕರಾದ ಶ್ರೀಮತಿ ತಾರಾ ಅನುರಾಧ ಅವರು ಆಗಮಿಸಿದ್ದರು.ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಇಂದಿನ ಶಿಕ್ಷಣದ ವ್ಯವಸ್ಥೆ, ಪೋಷಕರ ಜವಾಬ್ದಾರಿ, ಹಾಗೂ ನಮ್ಮ ಶಾಲೆಯಲ್ಲಿ ಹಿರಿಯ ಪೋಷಕರಿಗೆ ನೀಡಿರುವ ಗೌರವವನ್ನು ಪ್ರಶಂಸಿಸಿದರು. ನಮ್ಮ ಶಾಲೆಯ ದೀಪ ಪ್ರಜ್ವಲನೆಯನ್ನು, ಪ್ರಾರ್ಥನೆಯನ್ನು ಮೆಚ್ಚಿದರು.
ಉಪನ್ಯಾಸಕರು, ಆರ್. ಎಸ್. ಎಸ್. ನ ಪ್ರಾಂತ ಪ್ರಚಾರ ಪ್ರಮುಖರು ಆಗಿರುವ, ಶ್ರೀಯುತ ರಾಜೇಶ್ ಪದ್ಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುಟ್ಟ ಮಕ್ಕಳು ವಿವಿಧ ಹಾಡುಗಳಿಗೆ ನರ್ತಿಸಿದರು.