Bengaluru, Dec. 28: International Human Day was celebrated herein Rashtrotthana Vidya Kendra – Banashankari. The children talked about Kuvempu’s life, literature and universal message found in his works. Kuvempu was a prominent Kannada poet, novelist, dramatist, critic and thinker. The genius of the twentieth century. Kuvempu gave universal message through his Aniketan verse. He earned the distinction of being the second ‘National Poet’ of Kannada. He was the one who brought the Jnanpith Award and the Central Sahitya Akademi Award to Kannada for the first time. He is also the first recipient of the Karnataka Ratna Award and Pampa Award given by the Government of Karnataka. The students said that in December 2015, the Karnataka government issued an order to celebrate Kuvempu’s birthday on December 29 as ‘World Human’ Day. A universal message was conveyed. Children also sang a song composed by Kuvempu.
ಬೆಂಗಳೂರು, ಡಿ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವಿಶ್ವಮಾನವ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳು ಕುವೆಂಪು ಅವರ ಜೀವನ, ಸಾಹಿತ್ಯ ಹಾಗೂ ಅವರ ಕೃತಿಗಳಲ್ಲಿ ಕಂಡುಬರುವ ವಿಶ್ವಮಾನವ ಸಂದೇಶದ ಕುರಿತಾಗಿ ಮಾತನಾಡಿದರು. ಕುವೆಂಪು ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ಕುವೆಂಪುರವರು ತಮ್ಮ ಅನಿಕೇತನ ಪದ್ಯದ ಮೂಲಕ ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ ‘ರಾಷ್ಟ್ರಕವಿ’ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಇವರು ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಹಾಗೆಯೇ ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು. ಕರ್ನಾಟಕ ಸರ್ಕಾರವು 2015ರ ಡಿಸೆಂಬರ್‌ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್ 29ನ್ನು ‘ವಿಶ್ವ ಮಾನವ’ ದಿನವನ್ನಾಗಿ ಆಚರಿಸಬೇಕಾಗಿ ಆದೇಶ ಹೊರಡಿಸಿತು ಎಂದು ವಿದ್ಯಾರ್ಥಿಗಳು ತಿಳಿಸಿದರು. ವಿಶ್ವಮಾನವ ಸಂದೇಶವನ್ನು ತಿಳಿಸಲಾಯಿತು. ಜೊತೆಗೆ ಕುವೆಂಪು ರಚಿತ ಹಾಡನ್ನು ಮಕ್ಕಳು ಹಾಡಿದರು.