Bengaluru, Jan. 19: Rashtrotthana Vidya Kendra-Banashankari Ghosh team has won the second position in the State School Band Competition of the State Sports Conference organized by Kreeda Bharati. The band team that participated in today’s competition practiced together 14 times, including Sundays and holidays, in preparation. For the district-level band competition, students practiced various formations and techniques such as extended formations, circular formations, and movements like “Dwipada tala,” “Mandachal,” and “Pratyutprachalanam.” In addition, the students of Rashtrotthana Vidya Kendra-Banashankari also competed in the March Fast category in the State Sports Conference and secured the third position.
ಬೆಂಗಳೂರು, ಜ. 19: ಕ್ರೀಡಾ ಭಾರತಿ ಕಡೆಯಿಂದ ಆಯೋಜಿಸಿದ್ದ ರಾಜ್ಯ ಕ್ರೀಡಾ ಸಮ್ಮೇಳನದ ರಾಜ್ಯ ಶಾಲಾ ಘೋಷ್ (School Band) ಸ್ಪರ್ಧೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿ ಘೋಷ್ ತಂಡವು ಶಾಲೆಗೆ ದ್ವಿತೀಯ ಸ್ಥಾನ ತಂದುಕೊಟ್ಟಿದೆ. ಇಂದಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬ್ಯಾಂಡ್ ತಂಡವು ತಯಾರಿಗಾಗಿ ಭಾನುವಾರ ಮತ್ತು ರಜಾದಿನಗಳನ್ನೊಳಗೊಂಡು 14 ಬಾರಿ ಒಟ್ಟಿಗೆ ಅಭ್ಯಾಸ ಮಾಡಿತು. ಜಿಲ್ಲಾ ಮಟ್ಟದ ಬ್ಯಾಂಡ್ ಸ್ಪರ್ಧೆಗಾಗಿ, ವಿದ್ಯಾರ್ಥಿಗಳು ವಿಸ್ತೃತ ರಚನೆಗಳು, ವೃತ್ತಾಕಾರದ ರಚನೆಗಳು ಮತ್ತು “ದ್ವಿಪದ ತಾಳ,” “ಮಂದಚಲ,” ಮತ್ತು “ಪ್ರತ್ಯುತ್ಪ್ರಚಲನಂ” ನಂತಹ ಚಲನೆಗಳಂತಹ ವಿವಿಧ ರಚನೆಗಳು ಮತ್ತು ತಂತ್ರಗಳನ್ನು ಅಭ್ಯಾಸ ಮಾಡಿದರು. ಜೊತೆಗೆ, ರಾಜ್ಯ ಕ್ರೀಡಾ ಸಮ್ಮೇಳನದಲ್ಲಿ ಮಾರ್ಚ್ ಫಾಸ್ಟ್ ವಿಭಾಗದಲ್ಲೂ ಕೂಡ ಸ್ಪರ್ಧೆ ನಡೆಸಿದ್ದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.