Bengaluru, Feb 13: Rashtrotthana Vidya Kendra – Banashankari organized a felicitation program for two students of the school, Pratyusha Shetty and Aditi Raghunandan Mudre, who participated as representatives of Karnataka and Goa Directorates in the Republic Day program held in Delhi on January 26, 2025.
Speaking on the occasion, Smt. Soumya, the NCC mentor of our school, praised the achievements of these two students. The selection process for this program was conducted in about eight stages. They were selected in the final round and reached the Republic Day camp in Delhi, representing our state and our school, and made us proud, said Soumya.Students Pratyusha and Aditi also shared their experiences during their participation in the camps in Delhi, from the selection process to the occasions when they met dignitaries. They both said that participating in the Republic Day has brought us joy and increased our confidence.Addressing the students, Correspondent Sri Vasanth Kumar praised the achievements of the NCC students in just two years of the start of NCC in our school and said that all other students should follow their example and bring glory to the school. Sri G. K. Shenoy, former secretary of Rashtrotthana Vidya Kendra – Banashankari and a well-wisher of Rashtrotthana Parishat, spoke and congratulated the students for their achievements. These two students who brought glory to the school were also honoured with a memento on behalf of our school. On this occasion, the ‘Best Organization of the Year 2024-25’ award given to our school’s NCC team by the Directorate of Karnataka and Goa was handed over to Sri Vasanth Kumar, the school’s correspondent, by our school’s Principal Smt. Purnima.
ಬೆಂಗಳೂರು, ಫೆ 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ 2025ರ ಜನವರಿ 26 ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಪ್ರತಿನಿಧಿಗಳಾಗಿ ಭಾಗವಹಿಸಿದವರಲ್ಲಿ ಶಾಲೆಯ ಇಬ್ಬರು ವಿದ್ಯಾರ್ಥಿಗಳಾದ ಪ್ರತ್ಯುಷ ಶೆಟ್ಟಿ ಮತ್ತು ಅದಿತಿ ರಘುನಂದನ್ ಮುದ್ರೆ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ನಮ್ಮ ಶಾಲೆಯ ಎನ್ ಸಿ ಸಿ ಮಾರ್ಗದರ್ಶಕರಾದ ಶ್ರೀಮತಿ ಸೌಮ್ಯ ಅವರು ಈ ಇಬ್ಬರು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು. ಈ ಒಂದು ಕಾರ್ಯಕ್ರಮಕ್ಕೆ ಸುಮಾರು ಎಂಟು ಹಂತಗಳಲ್ಲಿ ಆಯ್ಕೆಯ ಪ್ರಕ್ರಿಯೆಯನ್ನು ನಡೆಸಲಾಗಿತ್ತು. ಅಂತಿಮ ಹಂತದ ಸುತ್ತಿನಲ್ಲಿಯೂ ಆಯ್ಕೆಯಾಗಿ ದೆಹಲಿಯ ಗಣರಾಜ್ಯೋತ್ಸವ ಶಿಬಿರಕ್ಕೆ ತಲುಪಿ ನಮ್ಮ ರಾಜ್ಯವನ್ನು ಹಾಗೂ ನಮ್ಮ ಶಾಲೆಯನ್ನು ಪ್ರತಿನಿಧಿಸಿದರು ಮತ್ತು ನಮಗೆ ಹೆಮ್ಮೆಯನ್ನು ತಂದರು ಎಂದು ಸೌಮ್ಯ ಅವರು ತಿಳಿಸಿದರು.
ವಿದ್ಯಾರ್ಥಿಗಳಾದ ಪ್ರತ್ಯುಷ ಮತ್ತು ಆದಿತಿಯವರು ಕೂಡ ಈ ಸಂದರ್ಭದಲ್ಲಿ ಆಯ್ಕೆಯ ಪ್ರಕ್ರಿಯೆಯಿಂದ ಹಿಡಿದು ದೆಹಲಿಯ ಶಿಬಿರಗಳಲ್ಲಿ ತಾವು ಭಾಗವಹಿಸಿದ ಸಂದರ್ಭದಲ್ಲಿನ ತಮ್ಮ ಅನುಭವಗಳನ್ನು, ಗಣ್ಯರನ್ನು ಭೇಟಿಯಾದ ಸಂದರ್ಭಗಳನ್ನು ಹಂಚಿಕೊಂಡರು. ಗಣರಾಜ್ಯೋತ್ಸವದಲ್ಲಿ ಭಾಗವಹಿಸಿರುವುದು ನಮಗೆ ಸಂತೋಷವನ್ನು ತಂದಿದೆ ಹಾಗೂ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಅವರಿಬ್ಬರು ಹೇಳಿದರು.ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕರೆಸ್ಪಾಂಡೆಂಟ್ ಶ್ರೀ ವಸಂತ್ ಕುಮಾರ್ ಅವರು ನಮ್ಮ ಶಾಲೆಯಲ್ಲಿ ಎನ್ ಸಿ ಸಿ ಆರಂಭವಾಗಿ ಕೇವಲ ಎರಡು ವರ್ಷಗಳಲ್ಲಿ ಎನ್ ಸಿ ಸಿ ವಿದ್ಯಾರ್ಥಿಗಳು ತೋರಿಸಿದ ಸಾಧನೆಯನ್ನು ಶ್ಲಾಘಿಸಿದರು ಮತ್ತು ಇತರ ಎಲ್ಲಾ ವಿದ್ಯಾರ್ಥಿಗಳು ಇವರನ್ನು ಮಾದರಿಯನ್ನಾಗಿಸಿ ಕೊಂಡು ಹೀಗೆ ಶಾಲೆಗೆ ಕೀರ್ತಿಯನ್ನು ತರಬೇಕು ಎಂದು ಹೇಳಿದರು. ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಮಾಜಿ ಕಾರ್ಯದರ್ಶಿ ಮತ್ತು ರಾಷ್ಟ್ರೋತ್ಥಾನ ಪರಿಷತ್ತಿನ ಹಿತೈಷಿ ಶ್ರೀ ಜಿ ಕೆ ಶೆಣೈ ಮಾತನಾಡುತ್ತಾ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಶಾಲೆಗೆ ಕೀರ್ತಿ ತಂದ ಈ ಇಬ್ಬರು ವಿದ್ಯಾರ್ಥಿಗಳಿಗೂ ನಮ್ಮ ಶಾಲೆಯ ಪರವಾಗಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದಿಂದ ನಮ್ಮಶಾಲೆಯ ಎನ್ ಸಿ ಸಿ ತಂಡಕ್ಕೆ ದೊರೆತ ‘2024-25ನೇ ಸಾಲಿನ ಅತ್ಯುತ್ತಮ ಸಂಸ್ಥೆ’ ಎಂಬ ಪ್ರಶಸ್ತಿಯನ್ನು ನಮ್ಮ ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ಪೂರ್ಣಿಮಾ ಅವರು ಶಾಲೆಯ ಕರೆಸ್ಪಾಂಡೆಂಟ್ ಆಗಿರುವ ಶ್ರೀ ವಸಂತ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.