Yugadi & Dr. Keshav Baliram Hedgewar Jayanti in RVK – Banashankari

Bengaluru, Mar. 29: Yugadi and Dr. Keshav Baliram Hedgewar Jayanti were celebrated herein Rashtrotthana Vidya Kendra – Banashankari. The students explained in detail the life of Dr. Keshav Baliram Hedgewar, his participation in the freedom struggle and the establishment of the Swayamsevak Sangh, the way he dedicated himself in the work of the organization. Then the Yugadi festival was celebrated. Yugadi is the new year of Hindus. On this day, we should accept neem and jaggery equally and develop the self-confidence to face difficulties and joys. The entire nature is celebrating with new vitality for Yugadi. May that celebration find a home in everyone’s home and mind. The students talked about the celebration and importance of the Yugadi festival. The students sang a song about Yugadi that welcomes the new year. They performed a dance.

ಬೆಂಗಳೂರು, ಮಾ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಯುಗಾದಿ ಮತ್ತು ಡಾ. ಕೇಶವ ಬಲಿರಾಮ್ ಹೆಡಗೆವಾರ್ ಜಯಂತಿ ಆಚರಿಸಲಾಯಿತು. ವಿದ್ಯಾರ್ಥಿಗಳು ಡಾಕ್ಟರ್ ಜಿ ಅವರ ಜೀವನ, ಸ್ವತಂತ್ರ ಹೋರಾಟದಲ್ಲಿ ಅವರ ಪಾಲ್ಗೊಳ್ಳುವಿಕೆ ಮತ್ತು ಸ್ವಯಂಸೇವಕ ಸಂಘದ ಸ್ಥಾಪನೆ, ಸಂಘಟನೆಯ ಕಾರ್ಯದಲ್ಲಿ ಅವರು ತಮ್ಮನ್ನು ತಾವು ಅರ್ಪಿಸಿಕೊಂಡ ಬಗೆಯನ್ನು ಸವಿಸ್ತಾರವಾಗಿ ವಿವರಿಸಿದರು. ತದನಂತರ ಯುಗಾದಿ ಹಬ್ಬವನ್ನು ಆಚರಿಸಲಾಯಿತು. ಹಿಂದೂಗಳ ಹೊಸ ವರ್ಷ ಯುಗಾದಿ. ಈ ದಿನ ಬೇವು ಬೆಲ್ಲವನ್ನು ಸಮಾನವಾಗಿ ಸ್ವೀಕರಿಸಿ, ಕಷ್ಟ ಸುಖಗಳನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಮೂಡಿಸಿಕೊಳ್ಳಬೇಕು. ಯುಗಾದಿಗಾಗಿ ಇಡೀ ಪ್ರಕೃತಿಯೇ ನವ ಚೈತನ್ಯದಿಂದ ಸಂಭ್ರಮಿಸುತ್ತಿದೆ. ಆ ಸಂಭ್ರಮ ಪ್ರತಿಯೊಬ್ಬರ ಮನೆ ಮನದಲ್ಲೂ ಮನೆ ಮಾಡುವಂತಾಗಲಿ ಎಂದು ವಿದ್ಯಾರ್ಥಿಗಳು ಯುಗಾದಿ ಹಬ್ಬದ ಆಚರಣೆ ಮತ್ತು ಮಹತ್ವದ ಬಗ್ಗೆ ತಿಳಿಸಿದರು. ಹೊಸ ವರ್ಷವನ್ನು ಸ್ವಾಗತಿಸುವ ಯುಗಾದಿಯ ಕುರಿತಾದ ಗೀತೆಯನ್ನು ವಿದ್ಯಾರ್ಥಿಗಳು ಹಾಡಿದರು. ನೃತ್ಯವನ್ನು ಪ್ರದರ್ಶಿಸಿದರು.

Scroll to Top