Mathrubharati Samiti Inauguration in RVK – Banashankari

Mathrubharati Samiti Inauguration in RVK – Banashankari
Bangaluru, May 31: The 26th Mathrubharati Samiti was inaugurated herein Rashtrotthana Vidya Kendra – Banashankari.
Addressing the program, which started with a wreath laying ceremony, the school Principal, Smt. Nanda, said that it is a commendable factor that mothers are involved in many activities. She also informed the mothers about the five transformations organized on this occasion of Rashtrotthana celebrating its 60th year.
Then Smt. Vandana Shastri, the President of Mathrubharati Samiti, addressed the mothers and encouraged them that a woman should not just stay within the four walls of the house, but should grow at the international level and have the potential to achieve in many fields.
Smt. Girija informed the meeting about the nature of the work of Mathrubharati and how it has been carried out. Sri Praveen introduced to the mothers that the social work activities that the Rashtrotthana Parishat has been carrying out for sixty years. And a video on the topic of sixty years of achievements of the Rashtrotthana was shown.
The meeting discussed the activities that the mothers can organize on behalf of Matrubharathi in the coming days. The mothers discussed and shared their feelings and opinions freely.

ಬೆಂಗಳೂರು, ಮೇ 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ 2025 -26ನೇ ಸಾಲಿನ ಮಾತೃಭಾರತಿ ಸಮಿತಿಯನ್ನು ಉದ್ಘಾಟಿಸಲಾಯಿತು.
ಪುಷ್ಪಾರ್ಚನೆಯೊಂದಿಗೆ ಶುಭಾರಂಭಗೊಂಡ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪ್ರಧಾನಾಚಾರ್ಯರಾದ ಶ್ರೀಮತಿ ನಂದ ಅವರು, ಮಾತೆಯರು ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಅಂಶ ಎಂದು ಹೇಳಿದರು. ಜೊತೆಗೆ ರಾಷ್ಟ್ರೋತ್ಥಾನವು 60ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಆಯೋಜಿಸಿಕೊಂಡಿರುವ ಪಂಚ ಪರಿವರ್ತನೆಯ ಅಂಶಗಳನ್ನು ಮಾತೆಯರಿಗೆ ತಿಳಿಸಿದರು.
ನಂತರ ಮಾತೃಭಾರತಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವಂದನಾ ಶಾಸ್ತ್ರಿ ಅವರು ಮಾತೆಯರನ್ನು ಉದ್ದೇಶಿಸಿ ಮಾತನಾಡುತ್ತಾ ಹೆಣ್ಣು ಕೇವಲ ಮನೆಯ ನಾಲ್ಕು ಗೋಡೆಯ ಮಧ್ಯ ಇರುವುದಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಮತ್ತು ಅನೇಕ ಕ್ಷೇತ್ರಗಳಲ್ಲಿ ಸಾಧಿಸುವ ಸಾಮರ್ಥ್ಯವನ್ನು ಹೊಂದಿದ್ದಾಳೆ ಎಂದು ಪ್ರೋತ್ಸಾಹಿಸಿದರು.
ಮಾತೃಭಾರತಿಯ ಕಾರ್ಯ ಸ್ವರೂಪವನ್ನು, ನಡೆದು ಬಂದ ಬಗೆಯನ್ನು ಶ್ರೀಮತಿ ಗಿರಿಜಾ ಅವರು ಸಭೆಗೆ ತಿಳಿಸಿದರು. ಶ್ರೀ ಪ್ರವೀಣ್ ಅವರು ರಾಷ್ಟ್ರೋತ್ಥಾನ ಪರಿಷತ್ತು ಅರವತ್ತು ವರ್ಷಗಳಿಂದ ನಡೆಸುತ್ತಿರುವ ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಮಾತೆಯರಿಗೆ ಪರಿಚಯಿಸಿದರು. ಹಾಗೂ ರಾಷ್ಟ್ರೋತ್ಥಾನದ ಅರವತ್ತು ವರ್ಷಗಳ ಸಾಧನೆ ಎಂಬ ವಿಷಯದ ವೀಡಿಯೋವನ್ನು ಪ್ರದರ್ಶಿಸಲಾಯಿತು.
ಮುಂದಿನ ದಿನಗಳಲ್ಲಿ ಮಾತೃಭಾರತಿಯ ವತಿಯಿಂದ ಮಾತೆಯರು ಹಮ್ಮಿಕೊಳ್ಳಬಹುದಾದ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮಾತೆಯರು ತಮ್ಮ ಅನಿಸಿಕೆಗಳನ್ನು ಅಭಿಪ್ರಾಯಗಳನ್ನು ಮುಕ್ತವಾಗಿ ಚರ್ಚಿಸಿ ಹಂಚಿಕೊಂಡರು.

Scroll to Top