Bengaluru, June 4: Rashtrotthana Vidya Kendra – Banashankari 3 staff were felicitated on 4th June 2025 with the BSSCA Guru Samman Award by the Bangalore Sahodaya Schools Complex Association (BSSCA). Congratulations to: Godamani B, Academic Coordinator – Champion Educator: With 13 years of dedicated service as Academic Coordinator at RVK, she has been a pillar of academic excellence, known for her insightful leadership and unwavering commitment to student achievement. Dr. Jayashree V, Dance Teacher – Activity Warrior: A passionate and graceful mentor with 8 years at RVK, she has enriched the cultural fabric of school through her dedication to the performing arts.Pooja K, Public Relations Officer & Sahitya Sindhu Incharge – Operational Star Award: With 6 years of dynamic service, she has been the vibrant voice of RVK, strengthening school communication and has been at the forefront of creating a strong bond between parents and the school.
ಬೆಂಗಳೂರು, ಜೂ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ಮೂವರು ಗೌರವಾನ್ವಿತ ಸಿಬ್ಬಂದಿಗಳಿಗೆ ಜೂನ್ 4, 2025 ರಂದು ಬೆಂಗಳೂರು ಸಹೋದಯ ಶಾಲಾ ಸಂಕೀರ್ಣ ಸಂಘ (BSSCA)ದಿಂದ BSSCA ಗುರು ಸಮ್ಮಾನ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಶ್ರೀಮತಿ ಗೋದಮಣಿ ಬಿ, ಶೈಕ್ಷಣಿಕ ಸಂಯೋಜಕಿ, ಹಿರಿಯ ಶಿಕ್ಷಕಿ: ಆರ್‌ವಿಕೆಯಲ್ಲಿ ಶೈಕ್ಷಣಿಕ ಸಂಯೋಜಕಿಯಾಗಿ 13 ವರ್ಷಗಳ ಸಮರ್ಪಿತ ಸೇವೆಯೊಂದಿಗೆ, ಅವರು ಉತ್ತಮ ಶಿಕ್ಷಕಿಯೂ ಆಗಿದ್ದಾರೆ. ಅವರು ದಿಟ್ಟ ನಾಯಕತ್ವ ಗುಣ ಮತ್ತು ವಿದ್ಯಾರ್ಥಿಗಳ ಸಾಧನೆಗೆ ಸ್ಪೂರ್ತಿ ತುಂಬುವಲ್ಲಿ ಹೆಸರುವಾಸಿಯಾಗಿದ್ದಾರೆ. ಡಾ. ಜಯಶ್ರೀ ವಿ, ನೃತ್ಯ ಶಿಕ್ಷಕಿ: ಆರ್‌ವಿಕೆಯಲ್ಲಿ 8 ವರ್ಷಗಳ ಕಾಲ ಉತ್ಸಾಹಭರಿತ ಮತ್ತು ಆಕರ್ಷಕ ನೃತ್ಯ ಮಾರ್ಗದರ್ಶಕಿಯಾಗಿರುವ ಅವರು, ಪ್ರದರ್ಶನ ಕಲೆಗಳಿಗೆ ತಮ್ಮ ಸಮರ್ಪಣೆಯ ಮೂಲಕ ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಶ್ರೀಮಂತಗೊಳಿಸಿದ್ದಾರೆ. ಶ್ರೀಮತಿ ಪೂಜಾ ಕೆ, ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ಸಾಹಿತ್ಯ ಸಿಂಧು ಮೇಲ್ವಿಚಾರಕಿ: 6 ವರ್ಷಗಳ ಕ್ರಿಯಾಶೀಲ ಸೇವೆಯೊಂದಿಗೆ, ಶಾಲಾ ಸಂವಹನವನ್ನು ಬಲಪಡಿಸುತ್ತಿದ್ದಾರೆ ಮತ್ತು ಪೋಷಕರು ಮತ್ತು ಶಾಲೆಯ ನಡುವೆ ಬಲವಾದ ಬಾಂಧವ್ಯವನ್ನು ಸೃಷ್ಟಿಸುವಲ್ಲಿ ಅವರ ಸೇವೆ ಶ್ಲಾಘನೀಯ.