Bengaluru, June 22: Rashtrotthana Vidya Kendra – Banashankari participated in the ‘Green Sunday’ program organized by Adhamya Chetana Sanstha. The Adhamya Chetana Sanstha, which is leading under the leadership of Smt. Tejaswini Ananth Kumar, is organizing a tree planting program under the name of ‘Every Sunday Green Sunday’. In the 495th Green Sunday program held on Sunday, June 22nd, teachers of Rashtrotthana, mothers and children of Mathrubharati Samiti participated in this program under the guidance of the Pradhancharya Smt. Nanda. The Rashtrotthana Parivar, which left from Banashankari School in a school vehicle at around eight in the morning, reached Mane Eco Society in Anjanapura. Smt. Tejaswini Ananth Kumar, who arrived at the venue, informed everyone in detail about the activities being carried out by the Adamya Chetana Sanstha. The idea of zero waste management kitchen, plate bank, and Green Sunday all of these created a new curiosity and interest in environmental awareness among the family. On this occasion, Smt. Nanda, the principal of our school, informed the audience about the 60th anniversary of the Rashtrotthana Parishath, the path the Parishath has taken, and the five transformations that have been implemented this year. Then, everyone carried plants and other equipment needed for planting plants and went to the places marked earlier. They walked while shouting slogans about environmental awareness. They returned with the resolve to plant, fertilize, water, and preserve greenery. The gratitude of dedicating a Sunday for the environment and serving for a beautiful future was evident on everyone’s faces.
ಬೆಂಗಳೂರು, ಜೂ. 22: ಅದಮ್ಯ ಚೇತನ ಸಂಸ್ಥೆಯವರು ಆಯೋಜಿಸಿರುವ ʼಹಸಿರು ಭಾನುವಾರʼ ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯವರು ಭಾಗವಹಿಸಿದ್ದರು. ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರ ಮುಂದಾಳತ್ವದಲ್ಲಿ ಮುನ್ನಡೆಯುತ್ತಿರುವ ಅದಮ್ಯ ಚೇತನ ಸಂಸ್ಥೆಯು ʼಪ್ರತಿ ಭಾನುವಾರ ಹಸಿರು ಭಾನುವಾರʼ ಎಂಬ ಹೆಸರಿನಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಜೂನ್ 22ರ ಭಾನುವಾರದಂದು ನಡೆದ 495ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನದ ಶಿಕ್ಷಕರು, ಮಾತೃಭಾರತಿ ಸಮಿತಿಯ ಮಾತೆಯರು ಹಾಗೂ ಮಕ್ಕಳು ಪ್ರಧಾನಚಾರ್ಯರಾದ ಶ್ರೀಮತಿ ನಂದ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮುಂಜಾನೆ ಎಂಟು ಗಂಟೆಯ ಸುಮಾರಿಗೆ ಬನಶಂಕರಿ ಶಾಲೆಯ ಬಳಿಯಿಂದ ಶಾಲಾ ವಾಹನದಲ್ಲಿ ಹೊರಟ ರಾಷ್ಟ್ರೋತ್ಥಾನ ಪರಿವಾರವು ಅಂಜನಪುರದಲ್ಲಿರುವ ಮಾನೆ ಇಕೋ ಸೊಸೈಟಿಯನ್ನು ತಲುಪಿದರು. ಸ್ಥಳಕ್ಕೆ ಆಗಮಿಸಿದ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರು ಅದಮ್ಯ ಚೇತನ ಸಂಸ್ಥೆಯು ನಡೆಸುತ್ತಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ಎಲ್ಲರಿಗೂ ತಿಳಿಸಿದರು. ಶೂನ್ಯ ತ್ಯಾಜ್ಯ ನಿರ್ವಹಣೆಯ ಅಡುಗೆಮನೆ, ಪ್ಲೇಟ್ ಬ್ಯಾಂಕ್, ಹಸಿರು ಭಾನುವಾರದ ಕಲ್ಪನೆ ಇವೆಲ್ಲವೂ ಕೂಡ ಪರಿವಾರದವರಿಗೆ ಪರಿಸರ ಜಾಗೃತಿಯ ವಿಚಾರದಲ್ಲಿ ಹೊಸ ಕುತೂಹಲ, ಆಸಕ್ತಿಯನ್ನು ಮೂಡಿಸಿತು. ಈ ಸಂದರ್ಭದಲ್ಲಿ ನಮ್ಮ ಶಾಲೆಯ ಪ್ರಧಾನಚಾರ್ಯರಾದ ಶ್ರೀಮತಿ ನಂದ ಅವರು ರಾಷ್ಟ್ರೋತ್ಥಾನ ಪರಿಷತ್ತಿನ 60ನೇ ವರ್ಷದ ಸಂಭ್ರಮಾಚರಣೆ, ಪರಿಷತ್ತು ನಡೆದು ಬಂದ ದಾರಿ, ಈ ವರ್ಷ ಹಮ್ಮಿಕೊಂಡಿರುವ ಪಂಚ ಪರಿವರ್ತನೆಯ ಅಂಶಗಳು ಎಲ್ಲವನ್ನು ಸಭಿಕರಿಗೆ ತಿಳಿಸಿದರು. ಮುಂದೆ ಎಲ್ಲರೂ ಗಿಡಗಳನ್ನು ಮತ್ತು ಗಿಡ ನೆಡಲು ಬೇಕಾದ ಇತರ ಸಲಕರಣೆಗಳನ್ನು ಹೊತ್ತುಕೊಂಡು ಮೊದಲೇ ಗುರುತು ಮಾಡಿದ್ದ ಸ್ಥಳಗಳಿಗೆ ತೆರಳಿದರು. ಪರಿಸರ ಜಾಗೃತಿಯ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಗಿಡಗಳನ್ನು ನೆಟ್ಟು, ಗೊಬ್ಬರ, ನೀರನ್ನು ಹಾಕಿ ಹಸಿರನ್ನು ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ, ಹಿಂತೆರಳಿದರು. ಒಂದು ಭಾನುವಾರವನ್ನು ಪರಿಸರಕ್ಕಾಗಿ ಮೀಸಲಿಟ್ಟು, ಸುಂದರ ಭವಿಷ್ಯಕ್ಕಾಗಿ ಸೇವೆ ಮಾಡಿದ ಧನ್ಯತಾ ಭಾವವು ಎಲ್ಲರ ಮುಖದಲ್ಲೂ ಕಂಗೊಳಿಸುತ್ತಿತ್ತು.