Raksha Bandhan Celebration in RVK – Banashankari

Bengaluru, Aug. 11: Raksha Bandhan, a symbol of brotherhood and harmony, was celebrated herein Rashtrotthana Vidya Kendra – Banashankari. Explaining the importance of Raksha Bandhan, the students told everyone that this festival is not only about the bond between brothers and sisters, but also a cultural festival that strengthens all human relationships in society. They mentioned many mythological stories behind the festival and impressed everyone with its spiritual and social aspects. Later, the students presented a melodious song that spread the message of Raksha Bandhan. After that, the teachers tied Rakhi with tilak to all the teaching and non-teaching male staff of the school. The students also tied Rakhi to their classmates, and all the teachers tied Rakhi to each other. The students of class 8 visited places like government schools, hospitals, post offices in the vicinity and tied Rakhi to the people there and explained the importance of the festival.

ಬೆಂಗಳೂರು, ಆ. 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಸಹೋದರತೆ ಮತ್ತು ಸಾಮರಸ್ಯದ ಪ್ರತೀಕವಾದ ರಕ್ಷಾ ಬಂಧನವನ್ನು ಆಚರಿಸಲಾಯಿತು. ರಕ್ಷಾ ಬಂಧನದ ಮಹತ್ವವನ್ನು ತಿಳಿಸುತ್ತಾ ವಿದ್ಯಾರ್ಥಿಗಳು, ಈ ಹಬ್ಬವು ಸಹೋದರ-ಸಹೋದರಿಯರ ನಡುವಿನ ಬಾಂಧವ್ಯವಷ್ಟೇ ಅಲ್ಲ, ಸಮಾಜದ ಎಲ್ಲಾ ಮಾನವೀಯ ಸಂಬಂಧಗಳನ್ನು ಬಲಪಡಿಸುವ ಒಂದು ಸಾಂಸ್ಕೃತಿಕ ಉತ್ಸವವಾಗಿದೆ ಎಂದು ಎಲ್ಲರಿಗೂ ತಿಳಿಸಿದರು. ಹಬ್ಬದ ಹಿಂದಿನ ಅನೇಕ ಪೌರಾಣಿಕ ಕಥೆಗಳನ್ನು ಉಲ್ಲೇಖಿಸಿ, ಅದರ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಅಂಶಗಳನ್ನು ಮನದಟ್ಟುಗೊಳಿಸಿದರು. ನಂತರ, ವಿದ್ಯಾರ್ಥಿಗಳು ರಕ್ಷಾ ಬಂಧನದ ಸಂದೇಶವನ್ನು ಸಾರುವ ಮಧುರವಾದ ಗಾಯನವನ್ನು ಪ್ರಸ್ತುತಪಡಿಸಿದರು. ಅದರ ನಂತರ, ಶಿಕ್ಷಕಿಯರು ಶಾಲೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಪುರುಷ ಸಿಬ್ಬಂದಿ ವರ್ಗದವರಿಗೆ ತಿಲಕವಿಟ್ಟು ರಾಖಿಯನ್ನು ಕಟ್ಟಿದರು. ವಿದ್ಯಾರ್ಥಿಗಳೂ ತಮ್ಮ ಸಹಪಾಠಿಗಳಿಗೆ, ಶಿಕ್ಷಕಿಯರೆಲ್ಲರೂ ಪರಸ್ಪರ ರಾಖಿ ಕಟ್ಟಿದರು. 8ನೇ ತರಗತಿಯ ವಿದ್ಯಾರ್ಥಿಗಳು ಸುತ್ತಮುತ್ತಲಿನ ಸರ್ಕಾರಿ ಶಾಲೆಗಳು, ಆಸ್ಪತ್ರೆ, ಪೋಸ್ಟ್‌ ಆಫೀಸ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನವರಿಗೆ ರಾಖಿ ಕಟ್ಟಿದರು ಹಾಗೂ ಹಬ್ಬದ ಮಹತ್ವವನ್ನು ವಿವರಿಸಿದರು.

Scroll to Top