Bengaluru, Feb. 25: A first aid health awareness program was organized for the students of class 9 herein Rashtrotthana Vidya Kendra – Banashankari. Dr. Dhanyatha Muninarayana, a pediatrician from Rashtrotthana Hospital, was present as the resource person for the program. The students were made aware of the importance of providing immediate care before taking the patient to the doctor in emergencies, the importance of first aid, its objectives and the role of the first aider. How to respond to emergencies such as skin injuries, fractures, choking, fainting, cardiac arrests. How to clean wounds, bandage them, care for wounds, deal with bleeding, bone fractures, sprains and splint them. The doctor answered the students’ questions calmly.
ಬೆಂಗಳೂರು, ಫೆ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೋತ್ಥಾನ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಧನ್ಯತಾ ಮುನಿನಾರಾಯಣರವರು ಆಗಮಿಸಿದ್ದರು. ತುರ್ತು ಸಂದರ್ಭಗಳಲ್ಲಿ ರೋಗಿಯನ್ನು ವೈದ್ಯರ ಬಳಿಗೆ ಕರೆದೊಯ್ಯುವ ಮೊದಲು ತಕ್ಷಣದ ಆರೈಕೆಯನ್ನು ಒದಗಿಸುವುದು, ಪ್ರಥಮ ಚಿಕಿತ್ಸಾ ಮಹತ್ವ, ಅದರ ಉದ್ದೇಶಗಳು ಮತ್ತು ಪ್ರಥಮ ಚಿಕಿತ್ಸಕನ ಪಾತ್ರವನ್ನು ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅರ್ಥಮಾಡಿಸಲಾಯಿತು. ಚರ್ಮದ ಗಾಯ, ಮುರಿತ, ಉಸಿರುಗಟ್ಟಿಸುವಿಕೆ, ಮೂರ್ಛೆ, ಹೃದಯ ಸ್ತಂಭನಗಳಂತಹ ಸೆಳವು ತುರ್ತುಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಗಾಯಗಳನ್ನು ಸ್ವಚ್ಛಗೊಳಿಸುವುದು, ಬ್ಯಾಂಡೇಜ್ ಮಾಡುವುದು, ಗಾಯದ ಆರೈಕೆ, ರಕ್ತಸ್ರಾವ, ಮೂಳೆ ಮುರಿತ, ಉಳುಕುಗಳ ಸಂದರ್ಭಗಳನ್ನು ನಿಭಾಯಿಸುವುದು ಮತ್ತು ಸ್ಪ್ಲಿಂಟ್ ಮಾಡುವುದು ಹೇಗೆ ಎಂಬ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ವೈದ್ಯರು ಸಮಾಧಾನದಿಂದ ಉತ್ತರವನ್ನು ನೀಡಿದರು.