Bengaluru, May. 25: Aksharabhyasa was organized for Pre-KG and LKG children (newly enrolled in the school) and a Vidyarambha program for newly enrolled children from UKG to Class 12 herein Rashtrotthana Vidya Kendra – Banashankari. The program began with Ganapati Homa and Saraswati Homa. Sri Swami Adityananda Saraswati Guruji presided over the program. The chief guests were welcomed to the stage with a full kumbha. In the introductory speech of the program, Sri Vasanth Kumar introduced Rashtrotthana schools and hospitals and gave detailed information about the growth and record achieved by the Sadhana and Tapas teams. Then Sri Swami Adityananda Saraswati Swamiji conducted Aksharabhyasa programs for Pre-KG children and taught shlokas to the newly enrolled children to initiate them into the school. In his speech, he stressed the importance of giving good culture and education to children. He said that literacy is not just about the ability to read and write, but also the foundation for knowledge acquisition and personality development. He also encouraged parents to actively participate in their children’s learning. He told the parents that cultured education is very important.All the participating children were given gifts and prasad.
ಬೆಂಗಳೂರು, ಮೇ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಪ್ರಿ ಕೆಜಿ ಮತ್ತು ಎಲ್ ಕೆ ಜಿ ಮಕ್ಕಳಿಗೆ (ಹೊಸದಾಗಿ ಶಾಲೆಗೆ ಸೇರಿರುವ) ಅಕ್ಷರಭ್ಯಾಸ ಮತ್ತು ಯುಕೆಜಿಯಿಂದ 12ನೇ ತರಗತಿಯ ಹೊಸದಾಗಿ ದಾಖಲಾಗಿರುವ ಮಕ್ಕಳಿಗೆ ವಿದ್ಯಾರಂಭ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಗಣಪತಿ ಹೋಮ ಹಾಗೂ ಸರಸ್ವತಿ ಹೋಮದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಈ ಕಾರ್ಯಕ್ರಮಕ್ಕೆ ಶ್ರೀ ಸ್ವಾಮಿ ಆದಿತ್ಯಾನಂದ ಸರಸ್ವತಿ ಗುರೂಜಿ ಅವರು ದಿವ್ಯಸಾನ್ನಿಧ್ಯ ವಹಿಸಿದ್ದರು.ಮುಖ್ಯ ಅತಿಥಿಗಳನ್ನು ಪೂರ್ಣಕುಂಭದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದ ಪ್ರಸ್ತಾವನೆ ನುಡಿಯಲ್ಲಿ ಶ್ರೀ ವಸಂತ್ ಕುಮಾರ್ ಅವರು ರಾಷ್ಟ್ರೋತ್ಥಾನ ಶಾಲೆಗಳ ಹಾಗೂ ಆಸ್ಪತ್ರೆಯ ಬಗ್ಗೆ ಪರಿಚಯ ನೀಡಿದರು ಹಾಗೂ ಸಾಧನ ಮತ್ತು ತಪಸ್ ತಂಡಗಳ ಬೆಳವಣಿಗೆಯ ಮತ್ತು ಸಾಧಿಸಿದ ದಾಖಲೆಯ ಬಗ್ಗೆ ಸವಿಸ್ತಾರದ ಮಾಹಿತಿ ನೀಡಿದರು. ನಂತರ ಶ್ರೀ ಸ್ವಾಮಿ ಆದಿತ್ಯಾನಂದ ಸರಸ್ವತಿ ರವರು ಪ್ರಿಕೆಜಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು ಹಾಗೂ ಶಾಲೆಗೆ ಹೊಸದಾಗಿ ಸೇರಿದ ಮಕ್ಕಳಿಗೆ ವಿದ್ಯಾರಂಭವನ್ನು ಮಾಡುವ ಸಲುವಾಗಿ ಶ್ಲೋಕಗಳನ್ನು ಹೇಳಿಕೊಟ್ಟರು. ತಮ್ಮ ಭಾಷಣದಲ್ಲಿ, ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡುವುದರ ಮಹತ್ವವನ್ನು ಒತ್ತಿ ಹೇಳಿದರು. ಅಕ್ಷರ ಕಲಿಕೆ ಕೇವಲ ಓದುವ ಮತ್ತು ಬರೆಯುವ ಸಾಮರ್ಥ್ಯ ಮಾತ್ರವಲ್ಲದೆ, ಜ್ಞಾನಾರ್ಜನೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅಡಿಪಾಯ ಎಂದು ತಿಳಿಸಿದರು. ಅಲ್ಲದೆ, ಪೋಷಕರು ತಮ್ಮ ಮಕ್ಕಳ ಕಲಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು. ಸಂಸ್ಕಾರಯುತವಾದ ಶಿಕ್ಷಣ ಬಹಳ ಮುಖ್ಯ ಎಂದು ಪೋಷಕರಿಗೆ ಕಿವಿ ಮಾತನ್ನು ಹೇಳಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಉಡುಗೊರೆ ಮತ್ತು ಪ್ರಸಾದವನ್ನು ನೀಡಲಾಯಿತು.