Birsa Munda & Guru Nanak Jayanti Celebration in RVK – Banashankari

Bengaluru, Nov. 15: Guru Nanak Jayanti and Birsa Munda Jayanti were celebrated herein Rashtrotthana Vidya Kendra – Banashankari.Students spoke about the lives of Guru Nanak and Birsa Munda.Explaining the celebration, background and significance of Guru Nanak Jayanti, they said, “The Jayanti of Guru Nanak, the founder of Sikhism and the first Guru of the Sikhs, is celebrated with great respect by Sikhs all over the world every year in the month of Kartik. All the teachings of Guru Nanak are contained in the book Guru Granth Sahib, the holy religious book of the Sikhs. This book teaches selfless service for humanity, prosperity and social justice to everyone.” The teacher explained the celebration, background and significance of Birsa Munda Jayanti to the students, said, “Birsa Munda, a tribal from present-day Jharkhand, is known for challenging British Christian missionaries and rebelling against conversion activities along with the Munda and Oran communities.”

ಬೆಂಗಳೂರು, ನ. 15: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಬನಶಂಕರಿಯಲ್ಲಿ ಗುರುನಾನಕ್ ಜಯಂತಿ ಮತ್ತು ಬಿರ್ಸಾ ಮುಂಡಾ ಜಯಂತಿಯನ್ನು ಆಚರಿಸಲಾಯಿತು.ವಿದ್ಯಾರ್ಥಿಗಳು ಗುರುನಾನಕ್ ಮತ್ತು ಬಿರ್ಸಾ ಮುಂಡಾ ಅವರ ಜೀವನದ ಕುರಿತು ಮಾತನಾಡಿದರು.ಗುರುನಾನಕ್ ಜಯಂತಿಯ ಆಚರಣೆ, ಹಿನ್ನೆಲೆ ಮತ್ತು ಮಹತ್ತ್ವವನ್ನು ತಿಳಿಸುತ್ತ, “ಸಿಖ್ ಧರ್ಮದ ಸಂಸ್ಥಾಪಕ ಹಾಗೂ ಸಿಖ್ಖರ ಮೊದಲ ಗುರುವಾದ ಗುರುನಾನಕರ ಜಯಂತಿಯನ್ನು ಸಿಖ್ಖರು ಜಗತ್ತಿನಾದ್ಯಂತ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಅತ್ಯಂತ ಗೌರವದಿಂದ ಆಚರಿಸುತ್ತಾರೆ. ಸಿಖ್ಖರ ಪವಿತ್ರ ಧಾರ್ಮಿಕ ಗ್ರಂಥವಾದ ಗುರು ಗ್ರಂಥ ಸಾಹಿಬ್ ಪುಸ್ತಕದಲ್ಲಿ ಗುರುನಾನಕರ ಎಲ್ಲಾ ಬೋಧನೆಗಳು ಇವೆ. ಎಲ್ಲರಿಗೂ ಮಾನವೀಯತೆ, ಸಮೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಿಸ್ವಾರ್ಥ ಸೇವೆಯನ್ನು ಈ ಗ್ರಂಥ ಬೋಧಿಸುತ್ತದೆ” ಎಂದು ತಿಳಿಸಿದರು.ಶಿಕ್ಷಕರು ಬಿರ್ಸಾ ಮುಂಡಾ ಜಯಂತಿಯ ಆಚರಣೆ, ಹಿನ್ನೆಲೆ ಮತ್ತು ಮಹತ್ತ್ವವನ್ನು ತಿಳಿಸುತ್ತಾ “ಈಗಿನ ಜಾರ್ಖಂಡ್‌ನ ಬುಡಕಟ್ಟು ಜನಾಂಗಕ್ಕೆ ಸೇರಿದ ಬಿರ್ಸಾ ಮುಂಡಾ ಬ್ರಿಟಿಷ್ ಕ್ರಿಶ್ಚಿಯನ್ ಮಿಷನರಿಗಳಿಗೆ ಸವಾಲು ಹಾಕಿದ್ದಕ್ಕಾಗಿ ಮತ್ತು ಮುಂಡಾ ಮತ್ತು ಓರಾನ್ ಸಮುದಾಯಗಳೊಂದಿಗೆ ಮತಾಂತರ ಚಟುವಟಿಕೆಗಳ ವಿರುದ್ಧ ದಂಗೆ ಎದ್ದಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

Scroll to Top