Blood Donation Camp during PTM in RVK – Banashankari

Bengaluru, Oct 26: A blood donation camp was organized herein Rashtrotthana Vidya Kendra – Banashankari on the occasion of parent teacher meeting. Many parents donated blood. About 58 units of blood were collected in the camp. Also, a service desk was set up on this day to make the parents aware about the service activities taking place at Rashtrotthana Vidya Kendra – Banashankari and to involve them in large numbers. Sri Anil Kumar, Head of Service Department, introduced the parents about many service activities conducted by our school and encouraged more parents to participate in the service activities.

ಬೆಂಗಳೂರು, ಅಕ್ಟೋಬರ್ 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿ ಯಲ್ಲಿ ಪೋಷಕರ ಶಿಕ್ಷಕರ ಸಭೆಯ ಪ್ರಯುಕ್ತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಅನೇಕ ಪೋಷಕರು ರಕ್ತದಾನವನ್ನು ಮಾಡಿದರು. ಶಿಬಿರದಲ್ಲಿ ಸುಮಾರು 58 ಯೂನಿಟ್‍ಗಳಷ್ಟು ರಕ್ತ ಸಂಗ್ರಹವಾಯಿತು. ಹಾಗೆಯೇ ಈ ದಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ನಡೆಯುವ ಸೇವಾ ಚಟುವಟಿಕೆಗಳ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಲು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ತೊಡಗಿಸಿಕೊಳ್ಳಲು ಸೇವಾ ಡೆಸ್ಕ್ ಅನ್ನು ಹಾಕಲಾಗಿತ್ತು. ಸೇವಾ ವಿಭಾಗದ ಪ್ರಮುಖರಾಗಿರುವ ಶ್ರೀ ಅನಿಲ್ ಕುಮಾರ್ ಅವರು ಪೋಷಕರಿಗೆ ನಮ್ಮ ಶಾಲೆಯ ಮೂಲಕ ನಡೆಯುವ ಅನೇಕ ಸೇವಾ ಚಟುವಟಿಕೆಗಳ ಪರಿಚಯವನ್ನು ಮಾಡಿಸಿದರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹವನ್ನು ನೀಡಿದರು.

Scroll to Top