Bengaluru, Jan. 31: A Closing Ceremony of School Vahinis, which were divided among students, to facilitate a friendly competition was held herein Rashtrotthana Vidya Kendra – Banashankari. Sri Vasanth Kumar, the correspondent of five schools of Rashtrotthana, was present as the chief guest for the ceremony. After the school prayer, the Principal, Smt. Purnima, spoke encouraging words about the students. She inspired the students by telling the inspiring story of Gukesh, who recently won a chess game. Then, the student leader Shashank and the leader Aditi Shastri shared their experience of this year. They both said that if we move together, we can achieve anything, thanking everyone for their encouragement. The flag of the channel was handed over to the Principal. Based on the marks obtained by the students in many competitions held in the school throughout the year, Abhaya Channel was declared the winning channel. Finally, our school correspondent, Sri Vasanth Kumar, spoke about how winning people’s hearts is a very difficult task. Relationships and beliefs are important in life.
ಬೆಂಗಳೂರು, ಜ. 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಶಾಲಾ ವಿದ್ಯಾರ್ಥಿಗಳ ನಡುವಿನ ಸೌಹಾರ್ದಯುತ ಸ್ಪರ್ಧೆಗಾಗಿ ಶಾಲೆಯಲ್ಲಿ ವಿಭಾಗಿಸಲಾಗುವ ಶಾಲಾ ವಾಹಿನಿಗಳ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ರಾಷ್ಟ್ರೋತ್ಥಾನದ ಐದು ಶಾಲೆಗಳ ಕರೆಸ್ಪಾಂಡೆಂಟ್ ಆಗಿರುವ ಶ್ರೀ ವಸಂತ್ ಕುಮಾರ್ ಅವರು ಉಪಸ್ಥಿತರಿದ್ದರು. ಶಾಲಾ ಪ್ರಾರ್ಥನೆಯ ನಂತರ ಪ್ರಧಾನಾಚಾರ್ಯರಾದ ಶ್ರೀಮತಿ ಪೂರ್ಣಿಮಾ ಅವರು ವಿದ್ಯಾರ್ಥಿಗಳನ್ನು ಕುರಿತು ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು. ಇತ್ತೀಚೆಗಷ್ಟೇ ಚೆಸ್ ಆಟದಲ್ಲಿ ವಿಜೇತರಾದ ಗುಕೇಶ್ ನ ಪ್ರೇರಣದಾಯಕ ಕತೆಯನ್ನು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸಿದರು. ನಂತರ ವಿದ್ಯಾರ್ಥಿ ನಾಯಕ ಶಶಾಂಕ್ ಹಾಗೂ ನಾಯಕಿಯಾದ ಅದಿತಿ ಶಾಸ್ತ್ರಿ ಈ ವರ್ಷದ ತಮ್ಮ ಅನುಭವವನ್ನು ಹಂಚಿಕೊಂಡರು. ಜೊತೆಯಾಗಿ ಸಾಗಿದರೆ ಏನನ್ನಾದರೂ ಸಾಧಿಸಬಹುದು ಎಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು ಎಂದು ಅವರಿಬ್ಬರು ಹೇಳಿದರು. ವಾಹಿನಿಯ ಧ್ವಜವನ್ನು ಪ್ರಧಾನಾಚಾರ್ಯರಿಗೆ ಹಸ್ತಾಂತರಿಸಲಾಯಿತು. ಇಡೀ ವರ್ಷ ಶಾಲೆಯಲ್ಲಿ ನಡೆದ ಅನೇಕ ಸ್ಪರ್ಧೆಗಳ ಆಧಾರದಲ್ಲಿ ವಿದ್ಯಾರ್ಥಿಗಳು ಪಡೆದುಕೊಂಡ ಅಂಕಗಳನ್ನು ಆಧರಿಸಿ ಅಭಯವಾಹಿನಿಯನ್ನು ವಿಜೇತವಾಹಿನಿ ಎಂದು ಘೋಷಿಸಲಾಯಿತು. ಅಂತಿಮವಾಗಿ ನಮ್ಮ ಶಾಲೆಯ ಕರೆಸ್ಪಾಂಡೆಂಟ್ ಆದ ಶ್ರೀ ವಸಂತ್ ಕುಮಾರ್ ಅವರು ಮನುಷ್ಯರ ಹೃದಯ ಗೆಲ್ಲುವುದು ತುಂಬ ಕಷ್ಟಕರವಾಗಿರುವ ಕೆಲಸ. ಬಾಂಧವ್ಯ, ನಂಬಿಕೆಗಳು ಜೀವನದಲ್ಲಿ ಮುಖ್ಯ ಎಂಬ ಹಿತನುಡಿಗಳನ್ನು ಹೇಳಿದರು.