Club Inauguration Ceremony in RVK – Banashankari

Bengaluru, July 9: During the ‘Club Inauguration’ ceremony herein Rashtrotthana Vidya Kendra – Banashankari, School Correspondent, Sri Vasanth Kumar said “One should be committed to the association of which he is a member and should learn the things taught there earnestly” On this occasion, students were divided into groups according to subjects like language, mathematics, environment, heritage, art etc. and an association was formed. Principal, Smt. Poornima and Correspondent, Sri Vasanth Kumar released the Identity Cards of the association.Selected students performed talent show. A student secretary was appointed. The purpose of forming the association and how it will function in the coming days were informed.

ಬೆಂಗಳೂರು, ಜುಲೈ 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ, ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಶಾಲೆಯ ಬಾತ್ಮೀದಾರರಾದ ಶ್ರೀ ವಸಂತ್ ಕುಮಾರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ತಾವು ಸದಸ್ಯರಾಗಿರುವ ಸಂಘಕ್ಕೆ ಬದ್ಧರಾಗಿದ್ದು ಅಲ್ಲಿ ಕಲಿಸುವ ವಿಷಯಗಳನ್ನು ಮನಃಪೂರ್ವಕವಾಗಿ ಕಲಿಯಬೇಕು” ಎಂದು ಹೇಳಿದರು.ಈ ಸಂದರ್ಭದಲ್ಲಿ ಭಾಷೆ, ಗಣಿತ, ಪರಿಸರ, ಪರಂಪರೆ, ಕಲೆ ಮುಂತಾದ ವಿಷಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ಮಾಡಿ ಸಂಘವನ್ನು ರಚಿಸಲಾಯಿತು.ಪ್ರಧಾನಾಚಾರ್ಯರಾದ ಶ್ರೀಮತಿ ಪೂರ್ಣಿಮಾ ಹಾಗೂ ಬಾತ್ಮಿದಾರರಾದ ಶ್ರೀ ವಸಂತ್ ಅವರು ಸಂಘದ ಗುರುತಿನ ಚೀಟಿಗಳನ್ನು ಬಿಡುಗಡೆ ಮಾಡಿದರು. ಆಯ್ದ ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನ ಮಾಡಿದರು. ವಿದ್ಯಾರ್ಥಿ ಕಾರ್ಯದರ್ಶಿಯನ್ನು ನೇಮಿಸಲಾಯಿತು. ಸಂಘವನ್ನು ರಚಿಸಿರುವುದರ ಉದ್ದೇಶ, ಮುಂದಿನ ದಿನಗಳಲ್ಲಿ ಅದು ಕಾರ್ಯನಿರ್ವಹಿಸುವ ಬಗೆಯನ್ನು ತಿಳಿಸಲಾಯಿತು.

Scroll to Top