Bengaluru, June 14: Cyclothon and Walkathon was organized herein Rashtrotthana Vidya Kendra – Banashankari as part of World Environment Day and Yoga Day celebrations.The jatha was inaugurated by Sri Naveen, Sub-Inspector of Rajarajeshwari Nagar Police Station. Dr. Shaila H N, Medical Administrator of Rashtrotthana Hospital, graced the program.The jatha started from near Rajarajeshwari Temple. RVK students, NCC students, a group of staff, Matrubharatiya mothers, and parents chanted slogans about saving the environment in the jatha. Paper bags and seed balls were distributed to the public.The jatha proceeded till Jayadev Memorial Rashtrotthana Hospital, Rajarajeshwari Nagar. After reaching the destination, the students performed a touching drama and yoga dance on the problems caused by the use of plastic after the environmental song.The Chief Guest, Dr. Shaila H N, said that one should learn to cope with stress. Programs like yoga, pranayama, meditation are helpful in controlling stress. She addressed the gathering on the management of the ecosystem which is a real healthy lifestyle, saying that develop the habit of reading books. Later, the students were honoured with a small gift from the hospital for giving a cultural program with an excellent message.
ಬೆಂಗಳೂರು, ಜೂ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ವಿಶ್ವ ಪರಿಸರ ದಿನದ, ಹಾಗೂ ಯೋಗ ದಿನಾಚರಣೆಯ ಅಂಗವಾಗಿ, ಕಾಲ್ನಡಿಗೆ ಜಾಥ ಮತ್ತು ಸೈಕಲ್ ಜಾಥಾವನ್ನು ಆಯೋಜಿಸಲಾಗಿತ್ತು. ಈ ಜಾಥಾವನ್ನು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿರುವ ಶ್ರೀಯುತ ನವೀನ್ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೋತ್ಥಾನ ಆಸ್ಪತ್ರೆಯ ವೈದ್ಯಕೀಯ ಆಡಳಿತಾಧಿಕಾರಿ ಡಾ. ಶೈಲಾ ಎಚ್. ಎನ್. ಅವರು ಆಗಮಿಸಿದ್ದರು. ಜಾಥಾವು ರಾಜರಾಜೇಶ್ವರಿ ದೇವಸ್ಥಾನದ ಬಳಿಯಿಂದ ಪ್ರಾರಂಭವಾಯಿತು. ಆರ್ ವಿ ಕೆ ವಿದ್ಯಾರ್ಥಿಗಳು, ಎನ್ ಸಿ ಸಿ ವಿದ್ಯಾರ್ಥಿಗಳು, ಸಿಬ್ಬಂದಿಗಳ ಗುಂಪು, ಮಾತೃಭಾರತಿಯ ಮಾತೆಯರು, ಪೋಷಕರು ಜಾಥಾದಲ್ಲಿ ಪರಿಸರ ಉಳಿಸುವ ಬಗ್ಗೆ ಘೋಷಣೆಗಳನ್ನು ಕೂಗಿದರು. ಸಾರ್ವಜನಿಕರಿಗೆ ಪೇಪರ್ ಚೀಲ ಹಾಗೂ ಸೀಡ್ ಬಾಲ್ ಗಳನ್ನು ವಿತರಿಸುತ್ತ ಸಾಗಲಾಯಿತು. ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ, ರಾಜರಾಜೇಶ್ವರಿನಗರದವರೆಗೆ ಜಾಥಾ ಸಾಗಿತು.ಗಮ್ಯಸ್ಥಾನವನ್ನು ತಲುಪಿದ ನಂತರ, ಪರಿಸರ ಗೀತೆಯ ನಂತರ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ತೊಂದರೆಗಳ ಕುರಿತಾದ ನಾಟಕ ಮತ್ತು ಯೋಗ ನೃತ್ಯವನ್ನು ವಿದ್ಯಾರ್ಥಿಗಳು ಮನಮುಟ್ಟುವಂತೆ ಪ್ರದರ್ಶಿಸಿದರು. ಮುಖ್ಯ ಅತಿಥಿಗಳಾದ ಡಾ. ಶೈಲಾ ಎಚ್ ಎನ್ ಅವರು ಒತ್ತಡಗಳನ್ನು ನಿಭಾಯಿಸುವುದನ್ನು ಕಲಿತುಕೊಳ್ಳಬೇಕು. ಯೋಗ, ಪ್ರಾಣಾಯಾಮ, ಧ್ಯಾನದಂತಹ ಕಾರ್ಯಕ್ರಮಗಳು ಒತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಪುಸ್ತಕವನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಿ ಎನ್ನುತ್ತಾ ನೈಜ ಆರೋಗ್ಯಕರ ಜೀವನಶೈಲಿಯಾಗಿರುವ ಪರಿಸರ ವ್ಯವಸ್ಥೆಯ ನಿರ್ವಹಣೆಯ ಕುರಿತು ಸಭೆಯನ್ನುದ್ದೇಶಿಸಿ ಮಾತನಾಡಿದರು. ನಂತರ ಅತ್ಯುತ್ತಮ ಸಂದೇಶವನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದುದಕ್ಕಾಗಿ ವಿದ್ಯಾರ್ಥಿಗಳಿಗೆ ಆಸ್ಪತ್ರೆಯ ವತಿಯಿಂದ ಕಿರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.