Doctor’s Day Celebration in RVK – Banashankari

Bengaluru, July 1: Students of Rashtrotthana Vidya Kendra – Banashankari celebrated World Doctors’ Day by visiting Rashtrotthana Hospital in Rajarajeshwari Nagar. There, the students interacted with the doctors and asked them some questions related to their reasons for entering the medical profession, their motivation, their experiences in this profession, etc. On this occasion, Dr. Bharat, an emergency doctor, shared some of his professional experiences with the students. He spoke about the need for mental balance, clarity in difficult situations, and dedication in facing challenges. Similarly, Dr. Varsha, an Ayurvedic doctor, explained how to maintain healthy balance through the Ayurvedic system. The students respectfully presented a small handmade gift to the doctor.

ಬೆಂಗಳೂರು, ಜು. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯ ವಿದ್ಯಾರ್ಥಿಗಳು ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಗೆ ಭೇಟಿ ನೀಡುವ ಮೂಲಕ ವಿಶ್ವ ವೈದ್ಯರ ದಿನವನ್ನು ಆಚರಿಸಿದರು. ಅಲ್ಲಿ ಮಕ್ಕಳು ವೈದ್ಯರೊಂದಿಗೆ ಸಂವಾದವನ್ನು ನಡೆಸಿದರು ಮತ್ತು ಅವರು ವೈದ್ಯ ವೃತ್ತಿಗೆ ಬಂದಿರುವ ಕಾರಣ, ಪ್ರೇರಣೆ, ಈ ವೃತ್ತಿಗೆ ಬಂದ ಮೇಲಿನ ಅವರ ಅನುಭವಗಳು ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ಅವರಿಗೆ ಕೆಲವು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿದರು. ಈ ಸಂದರ್ಭದಲ್ಲಿ ತುರ್ತು ಸಂದರ್ಭದ ವೈದ್ಯರಾದ ಡಾ. ಭರತ್ ಅವರು ತಮ್ಮ ವೃತ್ತಿ ಜೀವನದ ಕೆಲವು ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಮಾನಸಿಕ ಸಮತೋಲನದ ಅಗತ್ಯ, ಕಠಿಣ ಸಂದರ್ಭದಲ್ಲಿ ಸ್ಪಷ್ಟತೆ, ಸವಾಲುಗಳನ್ನು ಎದುರಿಸುವಲ್ಲಿ ಸಮರ್ಪಣೆ ಇವುಗಳ ಕುರಿತು ಮಾತನಾಡಿದರು. ಹಾಗೆಯೇ ಆಯುರ್ವೇದ ವೈದ್ಯರಾದ ಡಾ. ವರ್ಷರವರು ಆಯುರ್ವೇದ ಪದ್ಧತಿಯ ಮೂಲಕ ಆರೋಗ್ಯದ ಸಮತೋಲನವನ್ನು ಕಾಯ್ದುಕೊಳ್ಳುವ ಬಗೆಯನ್ನು ತಿಳಿಸಿದರು. ವೈದ್ಯರಿಗೆ ವಿದ್ಯಾರ್ಥಿಗಳು ಗೌರವ ಪೂರ್ವಕವಾಗಿ ತಾವೇ ಕೈಯಲ್ಲಿ ತಯಾರಿಸಿದ ಕಿರು ಕಾಣಿಕೆಯನ್ನು ನೀಡಿದರು.

Scroll to Top