Green Day Celebration in RVK – Banashankari

Banashankari, June 19: Children of Rashtrotthana Vidya Kendra – Banashankari Gokulam celebrated Green Day.A forest safari was organized for the children in the village beauty and garden activity room.The children were told in detail about the importance of Green Day and the benefits of protecting nature. In the auditorium, the children performed a jatha program while chanting environmental slogans. They also performed a dance of Mother Nature. They also sang the song ‘Baa Baa Giliye…’In the square, the children watered the plants. The UKG children made their little hand prints.

ಬನಶಂಕರಿ, ಜೂ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿ ಶಾಲೆಯ ಗೋಕುಲಂ ಮಕ್ಕಳು ಹಸಿರು ದಿನಾಚರಣೆಯನ್ನು ಆಚರಿಸಿದರು.ಮಕ್ಕಳಿಗಾಗಿ ಕಾಡನ್ನು (ಸಫಾರಿ) ಹಳ್ಳಿಯ ಸೊಬಗು ಹಾಗೂ ಉದ್ಯಾನವನ ಚಟುವಟಿಕೆ ಕೊಠಡಿಯಲ್ಲಿ ಮಕ್ಕಳಿಗಾಗಿ ಪ್ರದರ್ಶಿಸಲಾಯಿತು. ಹಸಿರು ದಿನಾಚರಣೆಯ ಮಹತ್ವದ ಬಗ್ಗೆ ಹಾಗೂ ಪ್ರಕೃತಿಯನ್ನು ಕಾಪಾಡುವುದರಿಂದ ಆಗುವ ಪ್ರಯೋಜನವನ್ನು ಮಕ್ಕಳಿಗೆ ವಿಸ್ತಾರವಾಗಿ ತಿಳಿಸಲಾಯಿತು. ಆಡಿಟೋರಿಯಂನಲ್ಲಿ ಮಕ್ಕಳು ಪರಿಸರದ ಘೋಷವಾಕ್ಯಗಳನ್ನು ಹೇಳುತ್ತಾ ಜಾತಾ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಕೃತಿಮಾತೆಯ ನೃತ್ಯವನ್ನು ಕೂಡ ಪ್ರದರ್ಶಿಸಿದರು. ʼಬಾ ಬಾ ಗಿಳಿಯೇ…ʼ ಎಂಬ ಹಾಡನ್ನು ಕೂಡ ಹಾಡಿದರು. ಚೌಕಾಂಗಣದಲ್ಲಿ ಮಕ್ಕಳು ಗಿಡಗಳಿಗೆ ನೀರನ್ನು ಹಾಕಿದರು. ಯುಕೆಜಿ ಮಕ್ಕಳು ತಮ್ಮ ಪುಟ್ಟ ಹಸ್ತದ ಅಚ್ಚನ್ನು ಮೂಡಿಸಿದರು.

Scroll to Top